ಪುಟ್ಟ ಕಂದಮ್ಮಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಕೈಯಿಂದ ಬಾಚಿ ತಬ್ಬಿಕೊಂಡು ಒಮ್ಮೆ ಮುತ್ತು ಕೊಟ್ಟುಬಿಡೋಣ ಎಂದು ಪುಟ್ಟ ಮಗುವನ್ನು ಕಂಡರೆ ಅನಿಸದೆ ಇರುವುದಿಲ್ಲ. ಆದರೆ ಪುಟ್ಟ ಮಕ್ಕಳಿಗೆ ಮುತ್ತು ಕೊಡಬಹುದೇ, ಕೊಡಬಾರದೆ, ದೊಡ್ಡವರ ಮುತ್ತು ಮಗುವಿನ ಆರೋಗ್ಯ ವಿಷಯದಲ್ಲಿ ಎಷ್ಟು ಸುರಕ್ಷಿತ ಎಂಬುದನ್ನು ತಿಳಿಯೋಣ.
ಮಗುವಿನ ಮೇಲಿನ ಪ್ರೀತಿಯನ್ನು ಪೋಷಕರು, ಸಮೀಪದ ಬಂಧುಗಳು, ನೋಡಿಕೊಳ್ಳುವವರು ಮುತ್ತು ಕೊಡುವ ಮೂಲಕ ವ್ಯಕ್ತಪಡಿಸುತ್ತಾರೆ.
ಆದರೆ ಮಗುವಿನ ಕಿವಿಗೆ ಮುತ್ತು ಕೊಡುವಾಗ ಬಹಳ ಎಚ್ಚರವಾಗಿರಬೇಕು. ಮಗುವಿನ ತ್ವಚೆ, ಆರೋಗ್ಯ ಸೂಕ್ಷ್ಮವಾಗಿರುವುದರಿಂದ, ದೇಹದಲ್ಲಿ ಇನ್ನೂ ಶಕ್ತಿ,ಸಾಮರ್ಥ್ಯ ಬೆಳೆಯಬೇಕಿರುವುದರಿಂದ ಮುತ್ತು ನೀಡಿದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಗುವಿನ ಕಿವಿಗೆ ಮುತ್ತಿಡಬಾರದು ಎಂದು ಹೇಳುತ್ತವೆ ಸಂಶೋಧನೆಗಳು. ಮಗುವಿನ ಕಿವಿಗೆ ಮುತ್ತಿಡುವುದರಿಂದ ಮಗುವಿಗೆ ತೊಂದರೆಯಾಗುತ್ತದೆ. ಹಾಗಾಗಿ ಇದನ್ನು ಮಾಡಲೇಬಾರದು ಎಂದು ಸಂಶೋಧನೆಯೊಂದು ಹೇಳಿದೆ. ಕಿವಿಯ ಸಮೀಪ ಅಥವಾ ಕಿವಿಯ ಮೇಲೆ ಮುತ್ತಿಡುವುದರಿಂದ ಮಗುವಿನ ಕಿವಿಯ ಕಾಲುವೆ ಹಾಗೂ ಕಿವಿತಮಟೆಗೆ ಹಾನಿಯಾಗುವುದಂತೆ. ಪರಿಣಾಮ ಇದು ಕಿವಿ ಕೆಳದಿರುವಂತಹ ಸಮಸ್ಯೆಗೆ ಕಾರಣವಾಗಬಹುದು.
ಕಿವಿಯ ಮೇಲೆ ಮುತ್ತಿಡುವುದರಿಂದ ಉಂಟಾಗುವ ಬಲವು ಮಗುವಿನ ಒಳಕಿವಿಯಲ್ಲಿರು ದ್ರವದಲ್ಲಿ ಪ್ರಕ್ಷುಬ್ಧತೆ ಉಂಟು ಮಾಡಬಹುದು, ಇದು ಕಿವಿಯ ಶ್ರವಣ ಶಕ್ತಿಗೆ ಕಾರಣವಾದ ಸೂಕ್ಷ್ಮ ಕೂದಲಿನ ಕೋಶಗಳಿಗೆ ಹಾನಿ ಮಾಡುತ್ತದೆ.
ಈ ಹಾನಿಯು ಸಂವೇದನಾಶೀಲ ಶ್ರವಣ ನಷ್ಟ ಅಥವಾ ಶಾಶ್ವತ ಕಿವುಡುತನಕ್ಕೆ ಕಾರಣವಾಗಬಹುದು. ಈ ಸ್ಥಿತಿಯನ್ನು ರೀಟರ್ಸ್ ಇಯರ್ ಕಿಸ್ ಸಿಂಡ್ರೋಮ್ (REKS)ಎಂದು ಕರೆಯಲಾಗುತ್ತದೆ.