newsics.com
ಬೆಳಗಾವಿ: 5000 ರೂಪಾಯಿ ವಿಚಾರಕ್ಕೆ ಸಿಂಗರ್ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳ ಸಮೀಪ ನಡೆದಿದೆ.
ಮಾರುತಿ ಅಡಿವೆಪ್ಪ ಲಠ್ಠೆ (22) ಹತ್ಯೆಯಾದ ಯುವ ಹಾಡುಗಾರ. ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈರಪ್ಪ ಆ್ಯಂಡ್ ಗ್ಯಾಂಗ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುತ್ತಿದ್ದ ವಿಶಿಷ್ಟ ಪ್ರತಿಭಾಶಾಲಿ ಗಾಯಕ. ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಪ್ರಕಟಿಸುತ್ತಿದ್ದ ಮಾರುತಿ, ಇತ್ತೀಚೆಗೆ ಜನಪ್ರಿಯತೆಯನ್ನು ಸಂಪಾದಿಸಿದ್ದ.
ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ಕಾರ್ ಹರಿಸಿ 22 ವರ್ಷದ ಗಾಯಕ ಮಾರುತಿ ಅಡಿವೆಪ್ಪ ಲಟ್ಟೇ ಅವರನ್ನು ಕೊಲೆ ಮಾಡಲಾಗಿದೆ. ಈರಪ್ಪ ಅಕ್ಕಿವಾಟೆ ಸೇರಿದಂತೆ 11 ಜನ ಆರೋಪಿಗಳು ಮಾರುತಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿ ಈರಪ್ಪನ ಬಳಿ ಮಾರುತಿ 50,000 ರೂ. ಸಾಲ ಪಡೆದುಕೊಂಡಿದ್ದು, 45,000 ವಾಪಸ್ ನೀಡಿದ್ದ. ಬಾಕಿ 5 ಸಾವಿರ ರೂಪಾಯಿ ವಿಚಾರಕ್ಕೆ ಕೊಲೆ ಮಾಡಲಾಗಿದೆ.
ಕಬ್ಬು ಕಟಾವು ಕೆಲಸಕ್ಕೆ ಹೋಗದೇ, 5 ಸಾವಿರ ರೂ. ವಾಪಸ್ ಕೊಡದೇ ಇದ್ದ ಕಾರಣಕ್ಕೆ ಮಾರುತಿ ಕೊಲೆ ಮಾಡಲಾಗಿದೆ. ಇತ್ತೀಚೆಗೆ ಮಾರುತಿಗೆ ಹಾಡಿನಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಹಾಡುವುದರಲ್ಲಿ ಬ್ಯುಸಿಯಾಗಿದ್ದ. ಕೆಲಸಕ್ಕೂ ಹೋಗದೆ ಹಣವನ್ನು ಕೊಡದ ಹಿನ್ನೆಲೆಯಲ್ಲಿ ಮಾರುತಿಯನ್ನು ಹತ್ಯೆ ಮಾಡಲಾಗಿದೆ.
ಹತ್ಯೆಯ ನಂತರ ಮಾರುತಿಯ ಮೇಲೆ ಆರೋಪಿಗಳು ಕಾರ್ ಹತ್ತಿಸಿದ್ದಾರೆ. ಈ ವೇಳೆ ಕಾರ್ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದಾರೆ. ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿ ಈರಪ್ಪನಿಗೆ ಚಿಕಿತ್ಸೆ ಕೊಡಿಸಲಾಗಿದೆ.
https://www.newsics.com/2025/07/13/dont-kiss-this-part-of-young-children/