newsics.com
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಪಾತ್ರ ಮಾಡ್ತಿದ್ದ ರಮೋಲಾ ಎಲ್ಲರ ಮನಸ್ಸು ಗೆದ್ದಿದ್ದರು.ಸಾನಿಯಾ ಪಾತ್ರ ಮಾಡಿದ್ದ ರಮೋಲಾ, ಧಾರಾವಾಹಿಯಲ್ಲಿ ವಿಲನ್ ಆಗಿದ್ರೂ, ಜನರ ಮನಸ್ಸು ಕದ್ದಿದ್ರು. ನೋಡೋಕೆ ಕ್ಯೂಟ್ ಆಗಿದ್ದ ರಮೋಲಾ ಅಭಿನಯದ ಮೂಲಕ ಜನರನ್ನು ಸೆಳೆದಿದ್ದರು.
ಫ್ಯಾಷನ್ ಅನ್ನೇ ಜೀವಾಳವಾಗಿಸಿಕೊಂಡಿರುವ ನಟಿ ರಮೋಲಾ ಆಗಾಗ ಹೊಸ ಹೊಸ ಫೋಟೋಗಳು ಹಾಗೂ ಡ್ಯಾನ್ಸ್ ಮಾಡಿರೋ ರೀಲ್ಸ್ ಶೇರ್ ಮಾಡಿಕೊಳ್ಳುತ್ತ ಇರುತ್ತಾರೆ.
ರಾಮ ಸೀತೆ ಮುಕ್ತಾಯದ ಬಳಿಕ ಸದ್ಯ ಭರ್ಜರಿ ಬ್ಯಾಚುಲರ್ಸ್ನಲ್ಲಿ ಮೆಂಟರ್ ಆಗಿದ್ದಾರೆ. ಅದು ಬಿಗ್ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ಗೆ ಮೆಂಟರ್ ಆಗಿ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇದೀಗ ನಟಿ ರಮೋಲಾ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ಅವರ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ವೈಟ್ ಅಂಡ್ ವೈಟ್ ಕಾಸ್ಟ್ಯೂಮ್ನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿ ನೋಡುಗರ ಕಣ್ಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರಮೋಲಾ ಅವರು ಕನ್ನಡತಿ ಧಾರಾವಾಹಿ ಬಿಟ್ಟ ಮೇಲೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಿಚ್ಚಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೂವಿ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿತ್ತು. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
https://www.instagram.com/reel/DL-K0wlytul/?igsh=MWl6OWN4cWd4Z3I1OQ==