newsics.com
ಮಹಾರಾಷ್ಟ್ರ: ಯುವ ಚಾಲಕನೊಬ್ಬ ಓಡಿಸುತ್ತಿದ್ದ ಕಾರು ಆಳವಾದ ಕಂದಕಕ್ಕೆ ಉರುಳಿದ ಘಟನೆ ಮಹಾರಾಷ್ಟ್ರ ಸತಾರಾದ ಸದಾವಾಘಾಪುರ್ ಪ್ರದೇಶದಲ್ಲಿ ನಡೆದಿದೆ. ಈ ಅಪಘಾತದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಕಡಿದಾದ ಇಳಿಜಾರಿನ ಅಂಚಿಗೆ ಅಪಾಯಕಾರಿಯಾಗಿ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ಚಾಲಕ ಯಾವುದೋ ಸ್ಟಂಟ್ ಮಾಡಲು ಪ್ರಯತ್ನಿಸುತ್ತಿದ್ದ ಅಥವಾ ವಿಚಲಿತನಾಗಿದ್ದಂತೆ ಕಾಣುತ್ತದೆ,
ಚಾಲಕನನ್ನು ಕರಾಡ್ನ ಗೋಲೇಶ್ವರದ ನಿವಾಸಿ ಸಾಹಿಲ್ ಜಾಧವ್ (20) ಎಂದು ಗುರುತಿಸಲಾಗಿದೆ. ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, ಅಪಘಾತ ಸಂಭವಿಸಿದಾಗ ಜಾಧವ್ ಕಾರಿನೊಳಗೆ ಕುಳಿತು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಅವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.