newsics.com
ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದ ಟೈಟಲ್ ಗ್ಲಿಂಪ್ಸ್ ಈಗಾಗಲೆ ರಿಲೀಸ್ ಆಗಿದೆ. ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.
ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯಾಗಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ನಟಿಸಿದ್ದಾರೆ.
ಇದರಿಂದ ಯಶ್ ಅಭಿಮಾನಿಗಳಂತೂ ಭಾರೀ ಖುಷಿಯಾಗಿದ್ದಾರೆ. ರಾಮಾಯಣ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಬರಲಿದೆ. ಭಾಗ 1 2026ರ ದೀಪಾವಳಿಗೆ ಮತ್ತು ಭಾಗ 2 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ರಾವಣನಾಗಿ ಯಶ್ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕರ್ನಾಟಕದಲ್ಲೂ ರಾಮಾಯಣ ಹವಾ ಜಾಸ್ತಿಯಾಗಿಯೇ ಇದೆ. ಯಶ್‌ರನ್ನು ರಾವಣನ ಲುಕ್‌ನಲ್ಲಿ ನೋಡಲು ಜನ ಕಾಯುತ್ತಿದ್ದಾರೆ.
ಆದರೆ ನಿಜಕ್ಕೂ ರಾಮಾಯಣ ಭಾಗ 1ರಲ್ಲಿ ಯಶ್ ಪಾತ್ರ ಎಷ್ಟು ನಿಮಿಷದ್ದು?-ಅವರು ಇದಕ್ಕಾಗಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ತಿಳಿದರೆ ಅಚ್ಚರಿಯಾಗತ್ತೆ.
ಕೆಲವು ಮಾಧ್ಯಮಗಳ ವರದಿ ಪ್ರಕಾರ ರಾಮಾಯಣ ಭಾಗ 1ರಲ್ಲಿ ಯಶ್ (ರಾವಣ) ಕೇವಲ 15 ನಿಮಿಷ ಮಾತ್ರ ಕಾಣಿಸಿಕೊಳ್ಳುತ್ತಾರೆ. ರಾಮಾಯಣವನ್ನು ಸ್ಕ್ರಿಪ್ಟ್ ಹೇಗೆ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರಂಭದಲ್ಲಿ ರಾಮ (ರಣಬೀರ್ ಕಪೂರ್), ಸೀತೆ (ಸಾಯಿ ಪಲ್ಲವಿ) ಮತ್ತು ಲಕ್ಷ್ಮಣ (ರವಿ ದುಬೆ) ವನವಾಸಕ್ಕೆ ಹೋಗುವ ಕಥೆಯನ್ನು ಅದಕ್ಕೂ ಮುಂಚಿತವಾದ ಕೆಲವು ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ ಎಂದೂ ಹೇಳಲಾಗಿದೆ.
ಈ ಭಾಗದಲ್ಲಿ ಯಶ್ ಅವರ ಪಾತ್ರದ ಒಟ್ಟಾರೆ ಅವಧಿ 15 ನಿಮಿಷ ಎನ್ನಲಾಗಿದೆ. ಇನ್ನು ಈಗಾಗಲೇ ರಾಮಾಯಣ ಪಾರ್ಟ್ 1 ಚಿತ್ರೀಕರಣ ಮುಕ್ತಾಯಗೊಂಡಿದೆ. ಯಶ್ ಈಗಾಗಲೇ ವಿದೇಶಕ್ಕೆ ತೆರಳಿದ್ದಾರೆ.
ರಾಮಾಯಣ 2ನೇ ಭಾಗದಲ್ಲಿ ಯಶ್ ಪಾತ್ರದ ಅವಧಿ ಜಾಸ್ತಿ ಇರಬಹುದು ಎಂದು ಊಹಿಸಲಾಗುತ್ತಿದೆ. ರಾಮಾಯಣದಲ್ಲಿ ಯಶ್ ಪಾತ್ರಕ್ಕೆ ತುಂಬ ಮಹತ್ವ ಇದೆ. ಇದು ಅತಿಥಿ ಪಾತ್ರವಲ್ಲ. 15 ನಿಮಿಷ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿದ್ದರೂ, ಅದು ಇನ್ನೂ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ರಾಮಾಯಣ ಸಿನಿಮಾವನ್ನು ಒಟ್ಟಾರೆ 1600 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. 800 ಕೋಟಿ ರೂಪಾಯಿ ಬಜೆಟ್ ಎಂದು ಹೇಳಲಾಗಿತ್ತಾದರೂ ಬಳಿಕ ಇದು ಹೆಚ್ಚಾಯಿತು. ಅದರಲ್ಲಿ ರಾಮಾಯಣ ಭಾಗ 1ರ ಬಜೆಟ್ 900 ಕೋಟಿ ರೂ. ಆದರೆ, ಭಾಗ 2ರ ಬಜೆಟ್ 700 ಕೋಟಿ ರೂ.ಆಗಿದೆ.
ಯಶ್ ಈ ಸಿನಿಮಾಕ್ಕಾಗಿ 100 ಕೋಟಿ ರೂಪಾಯಿ ಸಂಬಳ ಪಡೆಯಲಿದ್ದಾರೆ. ಭಾಗ 1ಕ್ಕೆ 50 ಕೋಟಿ ರೂಪಾಯಿ, ಭಾಗ 2ಕ್ಕೆ 50 ಕೋಟಿ ರೂಪಾಯಿ ಎಂದು ವರದಿಯಾಗಿದೆ.
https://www.instagram.com/p/DLzmJ4qTE5f/?igsh=MXM5a3hxbDE4bmxuaQ==
Viral video ಮುದ್ದಿನ ನಾಯಿಗಾಗಿ ನದಿಗೆ ಜಿಗಿದ ನಟಿ! ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ
ನಿರುದ್ಯೋಗಿ ಮಗನ ಚಿಂತೆಯಲ್ಲೇ ಜೀವ ಕಳೆದುಕೊಂಡ ದಾವಣಗೆರೆ ಪಿಎಸ್ಸೈ ನಾಗರಾಜಪ್ಪ
https://www.newsics.com/2025/07/08/aamir-names-actor-vishnu-vishal-jwalas-daughter-mira/