newsics.com
ಯುರೋಪ್ :2023ರಲ್ಲಿ ನಮ್ಮ ಮೆಟ್ರೋದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ ಚರ್ಚೆಗೆ ಕಾರಣರಾಗಿದ್ದ ಖ್ಯಾತ ಯೌಟ್ಯೂಬರ್ ಇದೀಗ ಯುರೋಪ್ ಸಂಸದನಾಗಿ ಆಯ್ಕೆ ಆಗಿದ್ದಾರೆ.
ಜಗತ್ತನ್ನು ಸುತ್ತುತ್ತ, ಆ ದೇಶವನ್ನು ಪರಿಚಯ ಮಾಡುತ್ತ, ಯುಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿರುವ ಫೀಡಿಯಸ್ ಪನಾಯಿಯೋಟೊ ಅವರು ಯುರೋಪ್‌ನ ಸಿಪ್ರಸ್ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸಂಸದರಾಗಿ ಆಯ್ಕೆಯಾಗಿದ್ದಾರೆ.
2023ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಫೀಡಿಯಸ್ ಪನಾಯಿಯೋಟೊ, ನಮ್ಮ ಮೆಟ್ರೋವನ್ನು ಅಕ್ರಮವಾಗಿ ಪ್ರವೇಶಿಸಿ, ಟಿಕೆಟ್ ಇಲ್ಲದೆ ಪ್ರಯಾಣಿಸಿ, ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮೆಟ್ರೋ ರೈಲು ನಿಲ್ದಾಣದ ಪ್ರವೇಶಿಸಿದ್ದ ಫೀಡಿಯಸ್ ಪನಾಯಿಯೋಟೊ , ಗೇಟ್‌ಗಳಿಂದ ಜಿಗಿದು, ಮೆಟ್ರೋ ರೈಲಿನಲ್ಲಿ ಅಕ್ರಮವಾಗಿ ಪ್ರಯಾಣ ಮಾಡಿದ್ದರು. ಅಲ್ಲದೆ, “ಭಾರತದಲ್ಲಿ ಹೇಗೆ ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದನ್ನು ನಿಮಗೆ ತೋರಿಸುತ್ತೇನೆ” ಎಂದು ವಿಡಿಯೊದಲ್ಲಿ ಹೇಳಿದ್ದರು. ಇದಕ್ಕೆ ಬಿಎಂಆರ್‌ಸಿಎಲ್ ಅಸಮಾಧಾನ ವ್ಯಕ್ತಪಡಿಸಿತ್ತು.
ಇಂತಹ ಕುಚೇಷ್ಟೆ ಬುದ್ಧಿಯ ಫೀಡಿಯಸ್ ಪನಾಯಿಯೋಟೊ ಈಗ ಸಂಸತ್ ಸದಸ್ಯರಾಗಿದ್ದಾರೆ.