newsics.com
ಬೆಂಗಳೂರು: ಸರಕಾರದ ಕಾರ್ಯ ವೈಖರಿ ಬಗ್ಗೆ ಸ್ವತಃ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಂದಲೇ ಬಹಿರಂಗವಾಗಿ ಅಸಮಾಧಾನ ಸ್ಫೋಟಗೊಂಡು ದಿಲ್ಲಿ ಅಂಗಳ ತಲುಪಿದ ಬೆನ್ನಲ್ಲೇ ಪಕ್ಷದ ಪ್ರತಿ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ಅಹವಾಲು ಆಲಿಸುವಂತೆ ಹೈಕಮಾಂಡ್ ಖುದ್ದು ತನ್ನ ಪ್ರತಿನಿಧಿಯನ್ನು ಕಳುಹಿಸಿದೆ.
ರಾಜ್ಯ ರಾಜಕಾರಣದಲ್ಲಿ ಉಂಟಾದ ಅಲ್ಲೋಲ ಕಲ್ಲೋಲವನ್ನು ಸರಿಪಡಿಸಲು ಹೈಕಮಾಂಡ್ ಆಗಮಿಸಿದ್ದು, ಶಾಸಕರ ಜೊತೆ ಮೀಟಿಂಗ್ ನಡೆಸಲಿದ್ದಾರೆ.
ರಾಜ್ಯದಲ್ಲಾಗುತ್ತಿರುವ ಭ್ರಷ್ಟಾಚಾರದಿಂದ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರಾದ ಬಿ. ಆರ್ ಪಾಟೀಲ್ ಹಾಗೂ ರಾಜು ಕಾಗೆ ಅಸಮಾಧಾನ ಹೊರಹಾಕಿದ್ದು, ಇದರ ನಡುವೆಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಬುಲಾವ್ ನೀಡಿದ್ದಾರೆ.
ರಾಜ್ಯದಲ್ಲಿ ಉಂಟಾದ ಅಲ್ಲೋಲ ಕಲ್ಲೋಲದ ಬಗ್ಗೆ ಮಾತನಾಡಲು ಇಂದು ಮಧ್ಯಾಹ್ನ ಸುರ್ಜೆವಾಲ ಬೆಂಗಳೂರಿಗೆ ಆಗಮಿಸಲಿದ್ದು, 1.30ಕ್ಕೆ ಬಿ. ಆರ್ ಪಾಟೀಲ್ ರನ್ನು ಹಾಗೂ 2 ಗಂಟೆಗೆ ರಾಜು ಕಾಗೆಯವರ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಅಸಮಾಧಾನಕ್ಕೆ ಕಾರಣ ಹಾಗೂ ಇನ್ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡುವ ಸಾಧ್ಯತೆಯಿದೆ.
ಅಷ್ಟೇ ಅಲ್ಲದೆ, ಬೆಂಗಳೂರು ಭಾಗದ 40 ಶಾಸಕರ ಜೊತೆ ಅರ್ಧ ಗಂಟೆಗಳ ಕಾಲ ಮಾತು ಕತೆ ನಡೆಸಲಿದ್ದಾರೆ. ಈ ಮೀಟಿಂಗ್ ನಲ್ಲಿ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಎಎಸ್ ಪೊನ್ನಣ್ಣ, ಕುಣಿಗಲ್ ರಂಗನಾಥ್ ಅವರ ರೀತಿ ಬಿಜೆಪಿಯನ್ನು ಎದುರಿಸುವ ಬಗ್ಗೆ ಉಳಿದ ಶಾಸಕರಿಗೆ ತಿಳಿಸಿಕೊಡಲಾಗುತ್ತದೆ ಎನ್ನಲಾಗಿದೆ.
Karnataka Rains: ಜುಲೈ 3ರಿಂದ ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಳ: ಕರ್ನಾಟಕದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!