newsics.com
ಮದುವೆಯ ವಿಷಯಕ್ಕೆ ಬಂದಾಗ, ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆ ಬಹು ಮುಖ್ಯ ಪಾತ್ರವನ್ನು ವಹಿಸುವಂತೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ಹೌದು ಮದುವೆಯಾಗುವ ಗಂಡಿನ ವಯಸ್ಸು ಹೆಣ್ಣಿಗಿಂತ ಹೆಚ್ಚಿರಲೇಬೇಕು ಎಂದು ಹೇಳ್ತಾರೆ. ಆದ್ರೆ ಕೆಲವರು ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಹೆಣ್ಣನ್ನು ಮದುವೆಯಾಗುತ್ತಾರೆ. ಕೆಲ ಮಹಿಳೆಯರು ತಮಗಿಂತ 15-20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹ ಆಗ್ತಾರೆ.
ಪ್ರೇಮ ವಿವಾಹಗಳಲ್ಲಿ ಜೋಡಿಗಳು ವಯಸ್ಸಿನ ಅಂತರವನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ವಯಸ್ಸು ಮುಖ್ಯ ಅಲ್ಲ, ದಂಪತಿಗಳ ನಡುವೆ ಮುಖ್ಯವಾಗಿ ಬೇಕಾದದ್ದು, ಪ್ರೀತಿ, ನಂಬಿಕೆ, ವಿಶ್ವಾಸ ಎಂದು ಹೇಳ್ತಾರೆ. ಹೀಗಿದ್ರೂ ಕೂಡಾ ಅನೇಕರು ವಯಸ್ಸಿನ ಅಂತರ ಮುಖ್ಯ. ಗಂಡನ ವಯಸ್ಸು ಹೆಂಡ್ತಿಗಿಂತ ಹೆಚ್ಚಿರಬೇಕು, ದಂಪತಿಗಳ ನಡುವೆ ಕನಿಷ್ಠ 3 ರಿಂದ 5 ವರ್ಷಗಳ ಏಜ್ ಗ್ಯಾಪ್ ಇರಬೇಕು ಎಂದು ಹೇಳ್ತಾರೆ. ಆದರೆ ತನಗಿಂತ ವಯಸ್ಸಿನಲ್ಲಿ ಹಿರಿಯವಳನ್ನು ಮದುವೆಯಾಗಿ, ತನಗಿಂತ 10-15 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿ ಸಂತೋಷವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿರುವವರು ಹಲವರಿದ್ದಾರೆ. ಪತಿ ಪತ್ನಿಯರ ನಡುವೆ ಪರಸ್ಪರ ಗೌರವ ಮತ್ತು ತಿಳುವಳಿಕೆ, ನಂಬಿಕೆ, ಪ್ರೀತಿ, ಪ್ರಬುದ್ಧತೆ ಇರುವುದು ಬಹು ಮುಖ್ಯವಾಗಿದೆ.
ಗಂಡ ಹೆಂಡತಿ ನಡುವೆ 5 ರಿಂದ 7 ವರ್ಷಗಳ ವಯಸ್ಸಿನ ಅಂತರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಹುಡುಗಿಯರು ಹುಡುಗರಿಗಿಂತ ಮೊದಲೇ ಪ್ರಬುದ್ಧರಾಗುತ್ತಾರೆ. ಹುಡುಗಿಯರಲ್ಲಿ ಹಾರ್ಮೋನುಗಳ ಬದಲಾವಣೆ 7 ರಿಂದ 13 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗುತ್ತವೆ, ಆದರೆ ಹುಡುಗರಲ್ಲಿ ಈ ಬದಲಾವಣೆಗಳು 9 ರಿಂದ 15 ವರ್ಷ ವಯಸ್ಸಿನ ನಡುವೆ ಸಂಭವಿಸುತ್ತವೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಮಹಿಳೆಯರ ದೇಹದಲ್ಲಿ ಆರಂಭಿಕ ಹಂತದಲ್ಲಿಯೇ ಕಂಡುಬರುತ್ತವೆ, ಆದರೆ ಪುರುಷರಲ್ಲಿ ಈ ಬದಲಾವಣೆಗಳು ನಂತರ ಸಂಭವಿಸುತ್ತವೆ. ಆದ್ದರಿಂದ ಪ್ರಬುದ್ಧತೆಯ ದೃಷ್ಟಿಯಿಂದ ಮಹಿಳೆಯರು ತಮಗಿಂತ ದೊಡ್ಡ ವಯಸ್ಸಿನ ಪುರುಷನನ್ನೇ ಮದುವೆಯಾಗಬೇಕು.
CONGRESS : ಬೆಂಕಿ ಶಮನಕ್ಕೆ ಸುರ್ಜೇವಾಲ ಎಂಟ್ರಿ; ನಟ್ಟು ಬೋಲ್ಟ್ ಟೈಟ್ ಮಾಡಲು ರಾಜ್ಯಕ್ಕೆ ಹೈಕಮಾಂಡ್ ಎಂಟ್ರಿ!