newsics.com
ಕಲಬುರಗಿ ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಯ ಘಮಲು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
123ನೇ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದ್ದು, ಮಹಿಳೆ ನಮ್ಮ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಈ ನಿಟ್ಟಿನಲ್ಲಿ ನೀವು ಕಲಬುರಗಿ ಮಹಿಳೆಯರ ಸಾಧನೆಯನ್ನು ತಿಳಿಯಲೇಬೇಕು. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಕಲಬುರಗಿ ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಯ ಘಮಲು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆಯಲಾಗಿದೆ. ಆನ್‌ಲೈನ್ ಮೂಲಕ ಆರ್ಡರ್ ಬರುತ್ತಿವೆ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮವಿಶ್ವಾಸ, ಆತ್ಮನಿರ್ಭರದ ಪ್ರತೀಕವಾಗಿದೆ’ ಎಂದು ಶ್ಲಾಘಿಸಿದ್ದಾರೆ.