newsics.com
ಮುಂಬಯಿ: ನಟಿ ಶೆಫಾಲಿ ಜರಿವಾಲಾ ಅಕಾಲಿಕ ನಿಧನ ಚಿತ್ರರಂಗಕ್ಕೆ ಆಘಾತ ನೀಡಿದೆ. ಹೃದಯಾಘಾತದಿಂದ ಶೆಫಾಲಿ ನಿಧನ ಹೊಂದಿದ್ದಾರೆ. ಅವರ ಹಠಾತ್ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆ ಶೆಫಾಲಿ ಭಾಗಿಯಾಗಿದ್ದ ಪಾಡ್‌ಕಾಸ್ಟ್‌ನ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2024ರಲ್ಲಿ ನಟ ಪರಾಸ್ ಛಬ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಶೆಫಾಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಪರಾಸ್ ಶೆಫಾಲಿ “ಕುಂಡಲಿ” ಬಗ್ಗೆ ಮಾತನಾಡಿದ್ದರು. ಇದೇ ವಿಡಿಯೋದಲ್ಲಿ ಪರಾಸ್ “ಹಠಾತ್ ನಿಧನ”ದ ಬಗ್ಗೆ ಸುಳಿವು ನೀಡಿದ್ದರು.
“ನಾನು ನಿಮ್ಮ ಜಾತಕ ನೋಡಿದೆ. ಅದರಲ್ಲಿ 8ನೇ ಮನೆಯಲ್ಲಿ, ಚಂದ್ರ, ಬುಧ ಹಾಗೂ ಕೇತು ಇದೆ. ಚಂದ್ರ ಹಾಗೂ ಕೇತು ಜತೆಯಲ್ಲಿದ್ದರೆ ಅದು ಬಹಳ ಸಂಕಷ್ಟವನ್ನು ತಂದಿಡುತ್ತದೆ. 8ನೇ ಮನೆಯು ನಷ್ಟ, ಹಠಾತ್ ಸಾವು, ಖ್ಯಾತಿ, ಗುಪ್ತ ರಹಸ್ಯಗಳು, ತಾಂತ್ರಿಕ ಸಂಬಂಧಿತ ವಿಷಯಗಳನ್ನು ಸಹ ಸೂಚಿಸುತ್ತದೆ. ನಿಮ್ಮ ಜಾತಕದಲ್ಲಿ ಚಂದ್ರ -ಕೇತುವಿನ ಸಂಕಷ್ಟ ಇದೆ. ಆದರೆ ಇದರ ಜತೆ ಬುಧವಿದೆ. ಇದು ಆತಂಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಸೂಚಿಸುತ್ತದೆ” ಎಂದಿದ್ದರು.
ʼಬಿಗ್ ಬಾಸ್ 13ʼ ಶೆಫಾಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಸೀಸನ್‌ನಲ್ಲಿ ಪರಾಸ್ ಕೂಡ ಸ್ಪರ್ಧಿಯಾಗಿದ್ದರು.
ಶೆಫಾಲಿ ಅವರ ನಿಧನದ ಬಳಿಕ ಪರಾಸ್ ಸೋಶಿಯಲ್ ಮೀಡಿಯಾದಲ್ಲಿ “ಯಾರ ಜೀವನ ಎಷ್ಟು ಅಂಥ ಯಾರಿಗೂ ತಿಳಿದಿರುವುದಿಲ್ಲ, ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
https://www.instagram.com/reel/DLcI8SmIREI/?igsh=bGg1dHdkM2NmdzRl
Life style ನಿಮ್ಮ ಕಾಲುಗಳ ಕೊಳೆ ಮತ್ತು ಟ್ಯಾನಿಂಗ್ ಮಾಯವಾಗಬೇಕೆ ಜಸ್ಟ್ 2 ರೂ. ಖರ್ಚು ಮಾಡಿ ಸಾಕು!