newsics.com
ನೈನಿತಾಲ್: ಕುಮಾವು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋದ ಘಟನೆ ಬುಧವಾರ ನಡೆದಿದೆ.
ಭಾಷಣದ ಬಳಿಕ ಮಾಜಿ ಲೋಕಸಭಾ ಸಂಸದ ಮಹೇಂದ್ರಸಿಂಗ್ ಪಾಲ್ ಅವರೊಂದಿಗೆ ಮಾತಾಡುತ್ತಿದ್ದ ವೇಳೆ ಧನಕರ್ ಅವರ ಹೆಗಲಿನ ಮೇಲೆ ಮೂರ್ಛೆ ತಪ್ಪಿದ್ದಾರೆ.
ಮೂರು ದಿನಗಳ ಉತ್ತರಾಖಂಡದ ನೈನಿತಾಲ್ ಪ್ರವಾಸದಲ್ಲಿರುವ ಧನಕರ್ ಅವರು ಕುಮಾವು ವಿವಿಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬಳಿಕ, ಸಭಿಕರ ನಡುವೆ ಕುಳಿತಿದ್ದ ತಮ್ಮ ಸಂಸದೀಯ ಸಹೋದ್ಯೋಗಿ ಪಾಲ್ ಅವರ ಬಳಿ ಹೋದರು. ಈ ವೇಳೆ ಅವರಿಬ್ಬರೂ ಭಾವುಕರಾಗಿದ್ದರು. ಮಾತುತೆಯ ಬಳಿಕ ಧನಕರ್ ಅವರು ಪಾಲ್‌ರ ಭುಜದ ಮೇಲೆ ಮೂರ್ಛೆ ಹೋದರು.
ಕೂಡಲೇ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದರು. ಪರಿಣಾಮವಾಗಿ ಧನಕರ್ ಪ್ರಜ್ಞೆ ಮರಳಿತು. ಬಳಿಕ ಅವರನ್ನು ರಾಜಭವನಕ್ಕೆ ಕರೆದೊಯ್ಯಲಾಯಿತು.
Manali ಮನಾಲಿಗೆ ಬರಲೇಬೇಡಿ; ಇಲ್ಲಿನ ಸ್ಥಿತಿ ಪಾಕ್ ಗಿಂತ ಕೆಟ್ಟದಾಗಿದೆ ಎಂದ ಮಹಿಳೆ
Rain alert ರಾಜ್ಯದಲ್ಲಿ ಭಾರೀ ಮಳೆ; ಇಂದು ಸಹ ವಿವಿಧೆಡೆ ಶಾಲೆಗಳಿಗೆ ರಜೆ!