newsics.com
ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ಅವರು ಕಂಪ್ಲೇಂಟ್ ಕೊಟ್ಟಿದ್ದಾರೆ.ಇದರ ಬೆನ್ನಲ್ಲೇ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.
8 ವರ್ಷಗಳ ಹಿಂದೆ ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಚಿತ್ರ ಸಿದ್ಧವಾಗಿತ್ತು. ವಿಜಯಲಕ್ಷ್ಮೀ ಅರಸ್ ನಿರ್ಮಾಣದ ಈ ಸಿನಿಮಾಗೆ ಕೆ.ಮಾದೇಶ್ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ನಟಿಸಲು ರಚಿತಾ ರಾಮ್ 23 ಲಕ್ಷ ಸಂಭಾವನೆಗೆ ಒಪ್ಪಿದ್ದರು. 13 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. 2017ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅಲ್ಲಿಗೆ ಶೂಟಿಂಗ್ ಗೆ ಬರುವುದಾಗಿಯೂ ರಚಿತಾ ರಾಮ್ ಒಪ್ಪಿದ್ದರು. ಅದಕ್ಕಾಗಿ ಅವರಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಶೂಟಿಂಗ್ ಗೆ ಬರುತ್ತೇನೆ ಎಂದು ಹೇಳಿ 15 ದಿನ ಸತಾಯಿಸಿದ್ದರು. ಪ್ರತಿದಿನ ನಿರ್ಮಾಪಕಿ ರಚಿತಾ ರಾಮ್ ಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿ ಕಾದಿದ್ದಾರೆ. ಆದರೂ ರಚಿತಾ ರಾಮ್ ಬಂದಿಲ್ಲ. ಬೇರೆ ದಾರಿಯಿಲ್ಲದೇ ಕೇವಲ ಹೀರೋ ದೃಶ್ಯಗಳನ್ನಷ್ಟೇ ಚಿತ್ರೀಕರಿಸಿಕೊಂಡು ಚಿತ್ರತಂಡ ವಾಪಸ್ ಆಗಿತ್ತು.
ಹೀಗಾಗಿ ನಿರ್ಮಾಪಕಿ ರಚಿತಾ ರಾಮ್ನಿಂದ ಒಂದುವರೆ ಕೋಟಿ ಕಳೆದುಕೊಂಡಿದ್ದೇನೆ. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ಸತಾಯಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.