newsics.com
ಒಡಿಶಾ : ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ದುಷ್ಕರ್ಮಿಗಳ ತಂಡವೊಂದು ಸಾಮೂಹಿಕ ಅತ್ಯಾಚಾರವೆಸಗಿರುವ ಭೀಕರ ಘಟನೆ ಒಡಿಶಾದ ಗೋಪಾಲಪುರದಲ್ಲಿ ನಡೆದಿದೆ.
ಗೆಳೆಯನೊಂದಿಗೆ ಸಮುದ್ರದ ಬಳಿ ಕುಳಿತಿದ್ದ ವಿದ್ಯಾರ್ಥಿನಿಯನ್ನು 10 ಜನರ ಗುಂಪೊಂದು ಅತ್ಯಾಚಾರಗೈದಿದೆ.
ಫೆಸ್ಟಿವಲ್ ವೀಕ್ಷಿಸುತ್ತಿದ್ದ ವೇಳೆ ಮೂರು ಬೈಕ್ ಗಳಲ್ಲಿ ಬಂದ ಹತ್ತು ಜನರು, ಯುವತಿ ಹಾಗೂ ಆಕೆಯ ಗೆಳೆಯನನ್ನು ಸುತ್ತುವರೆದಿದ್ದಾರೆ. ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಕೈಗಳನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಯುವತಿಯನ್ನು ಎಳೆದೊಯ್ದಿದ್ದಾರೆ. ಹೀಗೆ ಯುವತಿಯನ್ನು ಎಳೆದೊಯ್ದ ದುಷ್ಕರ್ಮಿಗಳು ಅಜ್ಞಾತ ಸ್ಥಳದ ಮನೆಗೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾರೆ.
ಯುವಕ ಗೋಪಾಲಪುರದ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಸದ್ಯ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ, ಪ್ರಕರಣದ ತನಿಖೆ ಮುಂದುವರೆದಿದೆ.
Gold gets cheaper ಎರಡನೇ ದಿನವೂ ಚಿನ್ನ ಮತ್ತಷ್ಟು ಅಗ್ಗ, ಬೆಳ್ಳಿ ಯಥಾಸ್ಥಿತಿ