newsics.com
ನಿದ್ರೆ ಮಾಡುವಾಗ ಪದೇ ಪದೇ ಎಚ್ಚರವಾಗುವುದು, ಬಳಿಕ ಮಲಗಲು ಕಷ್ಟಪಟ್ಟು ಎದ್ದು ಟಿವಿ ನೋಡುವುದು, ಮೊಬೈಲ್ ಬಳಸುವುದು ಮಾಡಿರಬಹುದು. ಆದ್ರೆ ನಿಮಗೆ ರಾತ್ರಿ 3:07ರಿಂದ 3:15ರ ನಡುವೆ ಆಗಾಗ ಎಚ್ಚರವಾಗುತ್ತಿದ್ದರೆ ಅದಕ್ಕೆ ಹಲವು ಕಾರಣಗಳಿವೆ. ಹಾಗೆ ಇದು ಎಚ್ಚರಿಕೆಯಾಗಿಯೂ ನೀವು ಪರಿಗಣಿಸುವುದು ಉತ್ತಮ.
ಮಧ್ಯರಾತ್ರಿ ಎಚ್ಚರಗೊಳ್ಳುವುದು ಸಾಮಾನ್ಯ ವಿಚಾರ ಈ ಸಮಯದಲ್ಲಿ ನಾವು ಮತ್ತೆ ಮಲಗಿ ನಿದ್ರಿಸುತ್ತೇವೆ. ಆದ್ರೆ 3 ಗಂಟೆಯ ನಂತರ ಹಾಗೆ 3:15ರ ನಡುವೆ ಎಚ್ಚರಗೊಳ್ಳುವುದು ಆಧ್ಯಾತ್ಮಿಕ ವಿಚಾರವಾಗಿ ಹಾಗೆ ವೈಜ್ಞಾನಿಕ ವಿಚಾರವಾಗಿಯೂ ಹಲವು ರೀತಿಯ ಕಾರಣಗಳನ್ನು ಹೊಂದಿದೆ. ಜ್ಯೋತಿಷ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳಿಂದ ಇದನ್ನು ನೋಡುವುದಾರೆ 3 ಗಂಟೆ ಸಮಯದಲ್ಲಿ ಎಚ್ಚರವಾಗುವುದಕ್ಕೆ ಗ್ರಹಗತಿಗಳಲ್ಲಿನ ಬದಲಾವಣೆಯ ಸಮಯವಂತೆ. ಹಾಗೆ ಆಧ್ಯಾತ್ಮಿಕವಾಗಿ ನೀವು ಹೆಚ್ಚು ಪ್ರಬಲರಾಗಿದ್ದೀರಿ ಎಂದರ್ಥವಂತೆ.
ಭೌತಿಕ ಪ್ರಪಂಚ ಮತ್ತು ಆಧ್ಯಾತ್ಮಿಕ ಪ್ರಪಂಚದ ನಡುವಿನ ಅತ್ಯಂತ ಸಣ್ಣ ಸಮಯ ಇದು ಎನ್ನಲಾಗುತ್ತದೆ. ಈ ಸಮಯದಲ್ಲಿ ಎಚ್ಚರವಾಗುವುದು ನಿಮಗೆ ಅತೀಂದ್ರಿಯ ಸಂದೇಶ ಅಥವಾ ವಿಶೇಷ ಅನುಭವ ಪಡೆಯುವ ಸಮಯ ಎಂದು ಹೇಳಲಾಗುತ್ತದೆ. ಈ ಸಮಯವು ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ಬಹಳ ಉತ್ತಮ ಸಮಯ ಎನ್ನಲಾಗುತ್ತದೆ.
ಈ ಸಮಯದಲ್ಲೇ ಆತ್ಮಗಳ ಸಂಚಾರ ಮಾಡುತ್ತವೇ ಅಂತಲೂ ಹೇಳಲಾಗುತ್ತದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ತಿಳಿದುಬಂದಿಲ್ಲ. ಇನ್ನು ಈ ಸಮಯದಲ್ಲಿ ಮನಸ್ಸಿನ ತಳಮಳಗಳು ಕಳೆದುಕೊಳ್ಳಬಹುದಂತೆ ಹಾಗೆ ಯಾವುದಾದರು ಸಮಸ್ಯೆಗೆ ನಿಮಗೆ ಉತ್ತಮ ಪರಿಹಾರ ಯೋಚಿಸಲು ಉತ್ತಮ ಸಮಯವಂತೆ. ಅಂತಿಮವಾಗಿ ನೀವು ಈ ಸಮಯದಲ್ಲಿ ಎಚ್ಚರವಾಗುತ್ತಿದ್ದರೆ ನೀವು ಯಾವುದಾದರು ಸಮಸ್ಯೆಯಲ್ಲಿ ಸಿಲುಕಿದ್ದೀರಿ ಎಂದರ್ಥ ಹೀಗಾಗಿ ಈ ಸಮಸ್ಯೆಗೆ ಪರಿಹಾರ ಪಡೆಯಲು ನಿಮ್ಮ ಮನಸ್ಸು ಹಾತೊರೆಯುತ್ತಿದೆ ಎಂದರ್ಥವಂತೆ. ಹೀಗಾಗಿ ಈ ಸಮಯದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದು ಸಹ ಸುಲಭವಾಗಬಹುದಂತೆ.
ಇನ್ನು ರಾತ್ರಿ 3 ಗಂಟೆ ಸುಮಾರಿ ಎಚ್ಚರವಾಗಲು ವೈಜ್ಞಾನಿಕ ಹಾಗೂ ವೈದ್ಯಕೀಯ ಕಾರಣಗಳೇನು ಅನ್ನೋದನ್ನು ನೋಡೋದಾದ್ರೆ, ಈ ಸಮಯದಲ್ಲಿ ನಿಮ್ಮ ದೇಹದ ಉಷ್ಣತೆ ದಿನದ ಕನಿಷ್ಟ ಮಟ್ಟದಲ್ಲಿರಲಿದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಹಾಗೆ ಕಾರ್ಟಿಸೋಲ್‌ನಂತಹ ಹಾರ್ಮೋನ್, ಒತ್ತಡದ ಹಾರ್ಮೋನ್ ಈ ಸಮಯದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುತ್ತವೆ. ಹೀಗಾಗಿ ಈ ಸಮಯದಲ್ಲಿ ಎಚ್ಚರಗೊಂಡರೆ ಬಹುತೇಕರಿಗೆ ನಿದ್ರೆ ಬರುವುದಿಲ್ಲ ಅವರು ಎದ್ದು ವಾಷ್ ರೂಮ್ ಬಳಸುವುದು, ನಿದ್ರೆ ಇಲ್ಲದೆ ಕಳೆಯುವುದು, ಯೋಚನೆಯಲ್ಲಿ ಮುಳುಗುವುದು ನೋಡಬಹುದು.