newsics.com
ಗುಜರಾತ್ :242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ಪರಿಣಾಮ 241 ಜನರು ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ 5 ತಿಂಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಖುಷ್ಬೂ ರಾಜ್‌ಪುರೋಹಿತ್ ಎಂಬುವವರು ಅಂತ್ಯ ಕಂಡಿದ್ದಾರೆ.ಖು ಷ್ಬೂ ಮೂಲತಃ ಬಲೋತ್ರಾ ಜಿಲ್ಲೆಯ ಅರಬಾ ದುದಾವತ ಗ್ರಾಮದ ಖುಷ್ಬೂ ಕನ್ವರ್ ಮದುವೆ ಬಳಿಕ ಮೊದಲ ಬಾರಿ ತನ್ನ ಪತಿಯನ್ನು ಭೇಟಿಯಾಗಲು ಲಂಡನ್‌ಗೆ ಹೋಗುತ್ತಿದ್ದರು. ಆದ್ರೆ, ಅವರು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಜನವರಿ 18 ರಂದು ಲುನಿಯ ಖರಬೈರಾ ಪುರೋಹಿತ್ ನಿವಾಸಿ ವಿಪುಲ್ ಸಿಂಗ್ ರಾಜ್‌ಪುರೋಹಿತ್ ಅವರನ್ನು ವಿವಾಹವಾಗಿದ್ದರು. ವಿಪುಲ್ ಲಂಡನ್‌ನಲ್ಲಿ ವೈದ್ಯರಾಗಿದ್ದಾರೆ. ವೀಸಾ ಮತ್ತು ಇತರ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ, ಖುಷ್ಬೂ ತನ್ನ ಪತಿಯನ್ನು ಮೊದಲ ಬಾರಿಗೆ ಭೇಟಿಯಾಗಲು ಲಂಡನ್‌ಗೆ ತೆರಳುತ್ತಿದ್ದರು.
ಗುರುವಾರ ಅಹಮದಾಬಾದ್‌ನ ಮೇಘನಾನಿ ನಗರದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI 171 ಅಪಘಾತಕ್ಕೀಡಾಯಿತು.