newsics.com
ಇಸ್ಲಾಮಾಬಾದ್ (ಪಾಕಿಸ್ತಾನ): 1972 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಿಮ್ಲಾ ಒಪ್ಪಂದ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಘೋಷಿಸಿದ್ದಾರೆ.
ಪಾಕಿಸ್ತಾನಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಘೋಷಣೆ ಮಾಡಿದ್ದಾರೆ.
ಅವರು ಹೇಳಿಕೆ ನೀಡಿದ ಮಾರನೇ ದಿನ ಅಂದರೆ ಶುಕ್ರವಾರ, ಸಿಮ್ಲಾ ಒಪ್ಪಂದ ಜೀವವಿಲ್ಲದ ದಾಖಲೆಯಲ್ಲ. ಸಚಿವರ ಹೇಳಿಕೆ ಸರಿಯಲ್ಲ. ಈ ಒಪ್ಪಂದದ ದಾಖಲೆಗಳು ಈಗಲೂ ಜೀವಂತ. ಎಲ್‌ಒಸಿ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಈಗ ಭಾರತ-ಪಾಕಿಸ್ತಾನ ನಡುವಿನ ಪರಿಸ್ಥಿತಿ ಮತ್ತೆ ಹಳೆಯ ರೀತಿಯಲ್ಲೇ ಇರುತ್ತದೆ ಮತ್ತು ‘ಲೈನ್ ಆಫ್ ಕಂಟ್ರೋಲ್’ (ನಿಯಂತ್ರಣ ರೇಖೆ) ಈಗ ‘ಕದನ ವಿರಾಮ ರೇಖೆ’ ಎಂದು ಪರಿಗಣಿಸಬೇಕು’ ಎಂದೂ ಖ್ವಾಜಾ ಅವರು ಹೇಳಿದರು.
ನೆಹರೂ ಅವರಂತಹ ನಾಯಕರ ಸ್ಥಾನಮಾನ ತುಂಬಾ ದೊಡ್ಡದಾಗಿತ್ತು, ಆದರೆ ಮೋದಿ ಅವರ ಸ್ಥಾನಮಾನ ಹಾಗಿಲ್ಲ ಎಂದು ಆಸಿಫ್ ಹೇಳಿದರು.
ಪ್ರಾದೇಶಿಕ ದೇಶಗಳು ನಮ್ಮ ಮೇಲೆ ಶಾಂತಿಗಾಗಿ ಒತ್ತಡ ಹೇರುತ್ತಿವೆ. ಆದರೆ ಭಾರತ ಮತ್ತೆ ಯುದ್ಧವನ್ನು ಹೇರಿದರೆ ಪಾಕಿಸ್ತಾನ ಹಿಂದಿಗಿಂತಲೂ ಕಠಿಣ ಪ್ರತಿಕ್ರಿಯೆ ನೀಡುತ್ತದೆ. ಪಾಕಿಸ್ತಾನಕ್ಕೆ ಶಾಂತಿ ಬೇಕು ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಅರ್ಥಮಾಡಿಸುವುದು ಮುಖ್ಯ, ಅದನ್ನು ಬಿಲಾವಲ್ ಭುಟ್ಟೋ ಮಾಡುತ್ತಿದ್ದಾರೆ ಎಂದರು.
Virat Kohli ಬೆಂಗಳೂರು ಕಾಲ್ತುಳಿತ ಕೇಸ್: ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲು