newsics.com
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ, ಮೃತದೇಹಗಳನ್ನು ಅವರವರ ಮನೆಗಳಿಗೆ ಸ್ಥಳಾಂತರಿಸಲು ಆಂಬುಲೆನ್ಸ್ ಕೊರತೆ ಉಂಟಾಗಿದ್ದು, ಪೋಷಕರು ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾಲ್ತುಳಿತ ದುರಂತದಲ್ಲಿ 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ದಿವ್ಯಾಂಶಿ(14) ಕೂಡ ಅಸುನೀಗಿದ್ದಾಳೆ. ಸಾವಿನ ಸುದ್ದಿ ತಿಳಿದು ಬೌರಿಂಗ್ ಆಸ್ಪತ್ರೆಗೆ ದೌಡಾಯಿಸಿದ್ದ ತಾತ ಲಕ್ಷ್ಮೀನಾರಾಯಣ, ಮೊಮ್ಮಗಳನ್ನು ನೆನೆದು ರೋದಿಸಿದರು.
ಬೆಂಗಳೂರಿನ ಕನಕಶ್ರೀ ಲೇಔಟ್‌ನ ನಿವಾಸಿಗಳಾದ ಶಿವಕುಮಾರ್ ಮತ್ತು ಅಶ್ವಿನಿ ದಂಪತಿ ಪುತ್ರಿ ದಿವ್ಯಾಂಶಿ ಬುಧವಾರ ಮಧ್ಯಾಹ್ನ ತಾಯಿ, ಚಿಕ್ಕಮ್ಮ ಸೇರಿ ಕುಟುಂಬದ ಐವರು ಸದಸ್ಯರೊಂದಿಗೆ ಆರ್‌ಸಿಬಿ ವಿಜಯೋತ್ಸವ ನೋಡಲು ಸ್ಟೇಡಿಯಂ ಬಳಿ ಬಂದಿದ್ದಳು.
ಈ ವೇಳೆ ಕಾಲ್ತುಳಿತ ಉಂಟಾಗಿ ಮೃತಪಟ್ಟಿದ್ದಾಳೆ. ರಾತ್ರಿ ಮನೆಯಲ್ಲೇ ಪಂದ್ಯ ವೀಕ್ಷಿಸಿದ್ದಳು. ಮಧ್ಯಾಹ್ನ ಕರೆ ಮಾಡಿದ್ದಾಗ ವಿಜಯೋತ್ಸವಕ್ಕೆ ಹೋಗುವುದು ಬೇಡ ಎಂದಿದ್ದೆ. ಆದರೂ ಕುಟುಂಬದ ಜತೆ ಬಂದಿದ್ದಳು. ಇದೀಗ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾಳೆ ಎಂದು ಮೊಮ್ಮಗಳನ್ನು ನೆನೆದು ಲಕ್ಷ್ಮೀನಾರಾಯಣ ಕಣ್ಣೀರಿಟ್ಟರು.
ಉಸಿರಾಟಕ್ಕೆ ತೊಂದರೆ ದುರಂತಕ್ಕೆ ಕಾರಣ: ವೈದ್ಯರ ಸ್ಪಷ್ಟನೆ, ಮೃತರ ವಿವರ ಇಲ್ಲಿದೆ
Railway tatkal ticket ಈ ತಿಂಗಳಾಂತ್ಯಕ್ಕೆ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಇ- ಆಧಾರ್ ದೃಢೀಕರಣ ಕಡ್ಡಾಯ
Census and caste census in two phases ಎರಡು ಹಂತಗಳಲ್ಲಿ ಜನಗಣತಿ, ಜಾತಿಗಣತಿ: ಯಾವಾಗ ಆರಂಭ?