newsics.com
ನವದೆಹಲಿ: 17 ವರ್ಷಗಳ ನಂತರ ಭಾರತ ತನ್ನ ರಾಷ್ಟ್ರೀಯ ಜನಗಣತಿ ನಡೆಸಲಿದ್ದು, ಜಾತಿಗಣತಿಯೂ ನಡೆಯಲಿದೆ.
ಜನಗಣತಿ ಜತೆ ಇದೇ ಮೊದಲ ಬಾರಿ ಜಾತಿಗಣತಿಯೂ ನಡೆಯಲಿದ್ದು, ಎರಡು ಹಂತಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಮೊದಲ ಹಂತ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್‌ನ ಗುಡ್ಡಗಾಡು ಮತ್ತು ಹಿಮಪಾತ ಪೀಡಿತ ಪ್ರದೇಶಗಳಲ್ಲಿ ಅಕ್ಟೋಬರ್ 1, 2026 ರಿಂದ ನಡೆಯಲಿದೆ.
ಮಾರ್ಚ್ 1, 2027 ರಿಂದ ಎರಡನೇ ಹಂತ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದು ಭಾರತದ 16 ನೇ ಜನಗಣತಿಯಾಗಿದ್ದು, ನರೇಂದ್ರ ಮೋದಿ ಸರ್ಕಾರದಲ್ಲಿ ಮೊದಲನೆಯದು.
ಭಾರತದಲ್ಲಿ ಕೊನೆಯ ಜನಗಣತಿಯನ್ನ 2011ರಲ್ಲಿ ನಡೆಸಲಾಯಿತು ಮತ್ತು ಅದೂ ಸಹ ಏಪ್ರಿಲ್ 1, 2010 ರಿಂದ ಎರಡು ಹಂತಗಳಲ್ಲಿ ನಡೆಸಲಾಗಿತ್ತು.
ಭಾರತದ ಜನಗಣತಿಯು ಐತಿಹಾಸಿಕವಾಗಿ 10 ವರ್ಷಗಳ ಮಾದರಿಯನ್ನು ಅನುಸರಿಸುತ್ತಿದೆ.
https://x.com/ANI/status/1930240978792632426?t=eKhrphwibTitXDRuyxaDxA&s=19
Railway tatkal ticket ಈ ತಿಂಗಳಾಂತ್ಯಕ್ಕೆ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಇ- ಆಧಾರ್ ದೃಢೀಕರಣ ಕಡ್ಡಾಯ
Actress sana wants ten children ನನಗೆ ಹತ್ತು ಮಕ್ಕಳು ಬೇಕೆಂದ ನಟಿ ಸನಾ ವಿರುದ್ಧ ಸಿಡಿಮಿಡಿ