newsics.com
ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮ ಭೂಮಿ ಮಂದಿರದ 2ನೇ ಹಂತದ ಪ್ರಾಣ ಪ್ರತಿಷ್ಠಾಪನೆಯು ಜೂ. 5ರಂದು ನಡೆಯಲಿದೆ. ಮಂದಿರ ಆವರಣದಲ್ಲಿರುವ ಇತರ ದೇಗುಲ ಗಳಲ್ಲಿ ಪ್ರಾಣ ಪ್ರತಿಷ್ಠಾಪನೆಯ ವಿಧಿಗಳು ಇಂದಿನಿಂದ ಆರಂಭವಾಗಲಿವೆ.
ಈ ವಿಧಿವಿಧಾನಗಳ ಆರಂಭಕ್ಕೆ ಮುನ್ನ, ದೇಗುಲದ ಗೋಪುರದ ಮೇಲ್ಭಾಗಕ್ಕೆ ಸ್ವರ್ಣಲೇಪನ ಮಾಡಲಾಗಿದೆ. ಇದು ಇಡೀ ದೇಗುಲಕ್ಕೆ ವಿಶೇಷ ಮೆರುಗು ನೀಡಿದೆ. ನಿನ್ನೆ ಸಂಜೆ ಸುಮಾರು 400 ಮಹಿಳೆಯರು ಸರಯೂ ನದಿಯಿಂದ ರಾಮ ಮಂದಿರದವರೆಗೆ ಕಲಶ ಯಾತ್ರೆ ನಡೆಸಿದ್ದಾರೆ.
ಇಂದು ಶಿವ, ಗಣೇಶ, ಸೂರ್ಯ ಮತ್ತು ಶೇಷಾವತಾರ ವಿಗ್ರಹ ಗಳನ್ನು ರಾಮ ಮಂದಿರದ ಸಂಕೀರ್ಣದ ನಾಲ್ಕು ಮೂಲೆಗಳಲ್ಲಿ ಸ್ಥಾಪಿಸಲಾಗುವುದು. ಮಂದಿರದ ದಕ್ಷಿಣ ಭಾಗದ ಕೇಂದ್ರ ಸ್ಥಳದಲ್ಲಿ ಆಂಜನೇಯನ ವಿಗ್ರಹವನ್ನು ಹಾಗೂ ಅನ್ನಪೂರ್ಣೆ ಮತ್ತು ದುರ್ಗೆಯ ವಿಗ್ರಹಗಳನ್ನು ಉತ್ತರ ಭಾಗದಲ್ಲಿ ಸ್ಥಾಪಿಸಲಾಗುವುದು. ಅಲ್ಲದೆ ರಾಮ ದರ್ಬಾರದ ವಿಗ್ರಹಗಳನ್ನು ಮೊದಲನೇ ಮಾಳಿಗೆಯಲ್ಲಿ ಸ್ಥಾಪಿಸಲಾಗುವುದು. ಬಳಿಕ ಈ ಎಲ್ಲ ವಿಗ್ರಹಗಳಿಗೆ ಸರಯೂ ನದಿಯ ನೀರಿನಿಂದ ಅಭಿಷೇಕ ನಡೆಸಲಾಗುತ್ತದೆ.
ಜೂ. 4ರಂದು ವಿಗ್ರಹಗಳಿಗೆ ಜಲಾಭಿಷೇಕ ನೆರವೇರಿಸಿ, ಎಲ್ಲ ಮಂದಿರಗಳಲ್ಲಿ ಪ್ರಸಾದ, ಹಣ್ಣುಗಳು, ಹಾಲು, ಮೊಸರು ಮತ್ತು ಜೇನು ತುಪ್ಪವನ್ನು ಅರ್ಪಿಸಲಾಗುವುದು. ಅಲ್ಲದೆ ಮಂದಿರದಲ್ಲಿ ಸಪ್ತಋಷಿಗಳ ವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ. ಮಂದಿರ ಸಂಕೀರ್ಣ ದೊಳಗಿನ ಈ ದೇಗುಲಗಳ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, “ಮಂದಿರ ಸಂಕೀರ್ಣದೊಳಗೆ 8 ಅದ್ಭುತ ದೇವಾಲಯಗಳನ್ನು ಹೊಸದಾಗಿ ನಿರ್ಮಿಸಲಾಗಿದೆ, ಎಲ್ಲ ವಿಗ್ರಹಗಳೂ ಶಾಸ್ತ್ರೀಯ ದೇವತಾ ವಿಗ್ರಹಗಳಾಗಿವೆ. ಈ ವಿಗ್ರಹಗಳ ಪವಿತ್ರ ಪ್ರಾಣಪ್ರತಿಷ್ಠಾ ಸಮಾರಂಭವನ್ನು ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆರಂಭಿಸ ಲಾಗುವುದು’ ಎಂದು ತಿಳಿಸಿದೆ.
ಕಾರ್ಯಕ್ರಮದ ಅಂತಿಮ ದಿನವಾದ ಜೂ. 5ರಂದು, ಅಭಿಜಿನ್ ಮುಹೂರ್ತದ ವೇಳೆ ವಿಶೇಷ ಪೂಜೆಗಳು ನಡೆಯಲಿವೆ. ಬೆಳಗ್ಗೆ 11ರಿಂದ 11.40ರೊಳಗೆ ಪ್ರಾರಂಭ ವಾಗಲಿರುವ ಈ ಪೂಜಾ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಚಂದೌಲಿಯ ಆಚಾರ್ಯ ಜೈ ಪ್ರಕಾಶ್ ಹಾಗೂ 101 ವೈದಿಕ ಆಚಾರ್ಯ ರೊಂದಿಗೆ ಪೂಜೆಗಳನ್ನು ಮತ್ತು ಪ್ರಾಣ ಪ್ರತಿಷ್ಠೆಯನ್ನು ನಡೆಸಲಿದ್ದಾರೆ.
https://x.com/ANI/status/1929493420021633054?ref_src=twsrc%5Etfw%7Ctwcamp%5Etweetembed%7Ctwterm%5E1929493420021633054%7Ctwgr%5E631a1bec3022383877d7e89d73e2b5b3d664f0d9%7Ctwcon%5Es1_c10&ref_url=https%3A%2F%2Fm.test.in%2F
T B Dam ಗುಜರಾತ್ ಕಂಪನಿಯಿಂದ ಟಿಬಿ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ಬದಲಾವಣೆ: 15 ತಿಂಗಳೊಳಗೆ ಕಾಮಗಾರಿ ಪೂರ್ಣ