Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > BMTC BUS ಯುವತಿ ಮೇಲೆಯೇ ಬಸ್ ಹತ್ತಿಸಲು ಯತ್ನಿಸಿದ BMTC ಚಾಲಕ ಅಮಾನತು, ವಿಡಿಯೋ ವೈರಲ್
ಕರ್ನಾಟಕಪ್ರಮುಖ

BMTC BUS ಯುವತಿ ಮೇಲೆಯೇ ಬಸ್ ಹತ್ತಿಸಲು ಯತ್ನಿಸಿದ BMTC ಚಾಲಕ ಅಮಾನತು, ವಿಡಿಯೋ ವೈರಲ್

Share
1 Min Read
SHARE

newsics.com

ಬೆಂಗಳೂರು: BMTC ಬಸ್ ಚಾಲಕ ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿರುವ ಘಟನೆ ಕಸ್ತೂರ್ಬಾ ರಸ್ತೆಯ ಕ್ಷೀನ್ಸ್ ಜಂಕ್ಷನ್ (ಎಂ.ಜಿ.ರಸ್ತೆ) ಬಳಿ ನಡೆದಿದೆ.

ಮೇ 23ರ ಸಂಜೆ 5.40ಕ್ಕೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಿಎಂಟಿಸಿ ಬಸ್ ಚಾಲಕ ಮತ್ತು ಯುವತಿ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೀನ್ಸ್ ಜಂಕ್ಷನ್ನಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಚಾಲಕನನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ, ಚಾಲಕ ಯುವತಿಯ ಮೇಲೆ ಬಸ್ ನುಗ್ಗಿಸಿದ್ದಾರೆ.
ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಯುವತಿಯ ಜೀವಕ್ಕೆ ಕುತ್ತು ಬರುತ್ತಿತ್ತು. ಚಾಲಕನ ಕೃತ್ಯ ಕಂಡು ಜನರು ಬೆಚ್ಚಿಬಿದ್ದಿದ್ದರು.

ಯುವತಿಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಮುಂದಾಗಿದ್ದ ಚಾಲಕ ಪ್ರಶಾಂತ್‌ನನ್ನು ಅಮಾನತುಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಹಡ್ಸನ್ ಸಿಗ್ನಲ್ನಲ್ಲಿ ಟ್ಯಾಂಕರ್ ಹಾಗೂ ಬಿಎಂಟಿಸಿ ಬಸ್ ಮುಂದೆ ಯುವತಿ ಕಾರು ಓಡಿಸಿಕೊಂಡು ಬಂದರು. ಆಗ ಯುವತಿ ಟ್ಯಾಂಕರ್ ಚಾಲಕನಿಗೆ ಬೈಯುತ್ತಾರೆ. ನಂತರ ಕಾರ್ಪೋರೇಷನ್ ಸಿಗ್ನಲ್ನಲ್ಲಿ ಜನರನ್ನು ಹತ್ತಿಸಿಕೊಳ್ಳುವಾಗ, ಜಗಳದಲ್ಲಿ ಒಂದು ಸಿಗ್ನಲ್ ಹೋಯ್ತು ಅಂತಾ ನಾನು ಬೈದೆ ಎಂದು ಅಮಾನತು ಆದ ಬಿಎಂಟಿಸಿ ಚಾಲಕ ಪ್ರಶಾಂತ್ ಹೇಳಿದರು.

ಈ ಸಲುವಾಗಿ ಬಿಎಂಟಿಸಿ ಬಸ್ ಅನ್ನು ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದರು. ಕಬ್ಬನ್ ಪೇಟೆ ಸಿಗ್ನಲ್ನಲ್ಲಿ ಬಸ್ ನಿಲ್ಲಿಸಿದಾಗ ಅವಾಚ್ಯ ಶಬ್ದದಿಂದ ಬೈದು, ನನ್ನ ‌ಮೇಲೆ ‌ಹಲ್ಲೆ ಮಾಡಲು ಮುಂದಾದರು. ಕೆಳಗೆ ಇಳಿ ಅಂತ ಕೈ ಸನ್ನೆ ಮಾಡಿದರು. ನನ್ನ ತಪ್ಪು ಇಲ್ಲದೆ ನಾನು ಏಕೆ ಕೆಳಗೆ ಇಳಿಯಲಿಲ್ಲ. ಎಡಭಾಗಕ್ಕೆ ಬಸ್ ಚಲಾಯಿಸಿದೆ ಹೊರತು ಯುವತಿ ಮೇಲೆ ನುಗ್ಗಿಸಲು ಪ್ರಯತ್ನಿಸಿಲ್ಲ ಎಂದು ಆರೋಪಿ ಡ್ರೈವರ್ ಪ್ರಶಾಂತ್ ಹೇಳಿದ್ದಾನೆ.

https://twitter.com/i/status/1929118933900300437

Relationsip ನಿಮ್ಮ ಲವರ್‌ಗೆ ಇಂಥ ಗಿಫ್ಟ್ ಕೊಡಲೇಬೇಡಿ, ಬ್ರೇಕಪ್ ಆಗಬಹುದು!

Rain Alert ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಿಗೆ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

TAGGED:BMTC driver suspended for trying to push bus over young woman
Share This Article
Facebook Twitter Copy Link Print
Previous Article ಬಾಣಸಿಗರು ಉದ್ದನೆಯ ಬಿಳಿ ಟೋಪಿಗಳನ್ನು ಏಕೆ ಧರಿಸುತ್ತಾರೆ?ಈ ಟೋಪಿಯನ್ನ ಏನಂತ ಕರಿತಾರೆ ಗೊತ್ತಾ
Next Article Rinku Singh:ಸಂಸದೆ ಪ್ರಿಯಾ ಜೊತೆ ಹಸೆಮಣೆ ಏರಲು ಸಜ್ಜಾದ ಕ್ರಿಕೆಟಿಗ ರಿಂಕು ಸಿಂಗ್!

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?