newsics.com
ಭಾರತೀಯ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ರಿಂಕು ಸಿಂಗ್ ವಿವಾಹವಾಗುವ ಸುದ್ದಿಗಳು ಬಹಳ ಚರ್ಚೆಗೆ ಗ್ರಾಸವಾಗಿದ್ದವು. ಈಗ ಇದೇ ಸುದ್ದಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ರಿಂಕು ಸಿಂಗ್ ಜೂನ್ 8 ರಂದು ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳಲಿದ್ದಾರೆ.
ಭಾರತದ ಇಬ್ಬರು ಖ್ಯಾತ ನಾಮರ ಮದುವೆ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಪದ್ಧತಿಯಿಂದ ಮಾಡಲು ನಿರ್ಧರಿಸಲಾಗಿದೆ. ಇವರ ವಿವಾಹ ಕಾರ್ಯಕ್ರಮವನ್ನು ನವೆಂಬರ್‌ನಲ್ಲಿ ವಾರಣಾಸಿಯಲ್ಲಿ ಆಯೋಜಿಸಲಾಗುವುದು ಎಂದು ವರದಿಯಾಗಿದೆ. ಇವರಿಬ್ಬರ ಮದುವೆ ಸಮಾರಂಭ ನವೆಂಬರ್ 18 ರಂದು ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ನಡೆಯಲಿದೆ
, ಅನೇಕ ದೊಡ್ಡ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಈ ವಿವಾಹದಲ್ಲಿ ಭಾಗವಹಿಸಲಿದ್ದಾರೆ. ಎಸ್‌ಪಿ ಶಾಸಕರ ಆಪ್ತರು ಹೇಳುವ ಪ್ರಕಾರ, ವಿವಾಹವು ಸಾಂಪ್ರದಾಯಿಕವಾಗಿ ನಡೆಯಲಿದೆ.
ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಒಬ್ಬ ಸಾಮಾನ್ಯ ಸ್ನೇಹಿತನ ಮೂಲಕ ಭೇಟಿಯಾದರು, ಆ ಸ್ನೇಹಿತನ ತಂದೆ ಕೂಡ ಕ್ರಿಕೆಟಿಗ ಎಂದು ಹೇಳಲಾಗುತ್ತದೆ. ಕಳೆದ ಒಂದು ವರ್ಷದಿಂದ ಇಬ್ಬರೂ ಒಬ್ಬರಿಗೊಬ್ಬರು ತಿಳಿದಿದ್ದು, ಪರಸ್ಪರ ಇಷ್ಟಪಟ್ಟಿದ್ದಾರೆ. ಜನವರಿ 2024ರಲ್ಲಿ, ಇಬ್ಬರ ಕುಟುಂಬಗಳು ‘ರೋಕಾ’ ಸಮಾರಂಭದ ಮೂಲಕ ಮದುವೆಗೆ ಒಪ್ಪಿಗೆ ನೀಡಿದ್ದವು. ಪ್ರಿಯಾ ಸರೋಜ್‌ರ ತಂದೆ ತೂಫಾನಿ ಸರೋಜ್, ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಮೂರು ಬಾರಿ ಶಾಸಕರಾಗಿದ್ದವರು.