
ಜೂನ್ 5 ರಂದು ಬಿಡುಗಡೆಯಾಗಲಿರುವ ನಟ ಕಮಲ್ ಹಾಸನ್ ಅವರ ಮುಂಬರುವ ಚಿತ್ರ ‘ಥಗ್ ಲೈಫ್’ ಅನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.
ಕಮಲ್ ಹಾಸನ್ ಬೆಂಗಳೂರಿನಲ್ಲಿ ನಡೆದ ಈವೆಂಟ್ನಲ್ಲಿ ಮಾತನಾಡುವಾಗ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಈ ಹೇಳಿಕೆಗೆ ರಾಜ್ಯಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದೆ.
ಕನ್ನಡ ಭಾಷೆಯ ಬಗ್ಗೆ ನಟನ ವಿವಾದಾತ್ಮಕ ಹೇಳಿಕೆಯನ್ನು ಆಕ್ಷೇಪಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಶುಕ್ರವಾರ ತಮ್ಮ ಕ್ರಮವನ್ನು ಪ್ರಕಟಿಸಿದೆ.
ಎಎನ್ಐ ವರದಿಯ ಪ್ರಕಾರ, ಕೆಎಫ್ಸಿಸಿ ಪ್ರತಿನಿಧಿ ಸಾ ರಾ ಗೋವಿಂದು ಅವರು ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.