newsics.com
ಕ್ವಾಲಿಫೈಯರ್ ಕದನದಲ್ಲಿ ಆರ್ಸಿಬಿ ಬೌಲರ್ಗಳು ನಿಜಕ್ಕೂ ಬೊಂಬಾಟ್ ಪ್ರದರ್ಶನ ನೀಡಿದ್ರು. ರಣಬೇಟೆಗಾರ ಹೇಜಲ್ವುಡ್ ಎಂಟ್ರಿಯಿಂದಾಗಿ ಇಡೀ ಆರ್ಸಿಬಿ ಬೌಲಿಂಗ್ ಅಟ್ಯಾಕ್ನ ಜೋಷ್ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಆರ್ಸಿಬಿಯ ರಾಯಲ್ ಬೌಲಿಂಗ್ಗೆ ಪಂಜಾಬ್ ಪಡೆ ಪತರುಗುಟ್ಟಿ ಹೋಯ್ತು.
ಫೈರಿ ಪರ್ಫಾಮೆನ್ಸ್ ಇದೀಗ ಫೈನಲ್ ಟಿಕೆಟ್ ಸಿಗುವಂತೆ ಮಾಡಿದೆ. 18 ವರ್ಷಗಳ ಸುದೀರ್ಘ ಕನಸು ನನಸಾಗಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಆ ಪಂದ್ಯದಲ್ಲೂ ಆರ್ಸಿಬಿ ಬೌಲರ್ಸ್ ಪವರ್ಫುಲ್ ಪರ್ಫಾಮೆನ್ಸ್ ನೀಡಿದ್ರೆ ಡೌಟೇ ಬೇಡ ಕಪ್ ನಮ್ದೇ!
ಇದೇ ಖುಷಿಯಲ್ಲ ಬೆಳಗಾವಿಯ ಯುವಕನೋರ್ವ ಆರ್‌ಸಿಬಿ ಗೆದ್ದರೆ ಆ ದಿನವನ್ನು RCB ಫ್ಯಾನ್ಸ್ ಹಬ್ಬ ಮತ್ತು ಒಂದು ದಿನ ರಜೆ ಘೋಷಣೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಅಭಿಮಾನಿಯಾಗಿದ್ದು, ಆರ್‌ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್‌ಸಿಬಿ ಫೈನಲ್ ತಲಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಐಪಿಎಲ್ ಪಂದ್ಯದಲ್ಲಿ ಒಂದು ವೇಳೆ ಆರ್ಸಿಬಿ ತಂಡ ಫೈನಲ್ಗೆ ಹೋಗಿ ಕಪ್ ಗೆದ್ದರೇ ಆ ದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್ಸಿಬಿ ಫ್ಯಾನ್ಸ್ ಹಬ್ಬ’ ಅಂತ ಅಧೀಕೃತವಾಗಿ ಘೋಷಿಸಿ ಪ್ರತಿವರ್ಷ ಸರ್ಕಾರ ರಜೆ ನೀಡಬೇಕು ಎಂದು ಬರೆದಿದ್ದಾನೆ.