newsics.com
ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ದಿನಗಳ ಪಂದ್ಯದಲ್ಲಿ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟಿಗರು ಹೊಡೆದಾಡಿಕೊಂಡಿದ್ದಾರೆ ಬಾಂಗ್ಲಾದೇಶದ 22 ವರ್ಷದ ಬ್ಯಾಟ್ಸ್‌ಮನ್ ರಿಪನ್ ಮೊಂಡೋಲ್ ಮತ್ತು ದಕ್ಷಿಣ ಆಫ್ರಿಕಾದ ಬೌಲರ್ ಶೆಬೊ ನದುಲಿ ನಡುವೆ ಮೈದಾನದಲ್ಲೇ ಭಾರಿ ಘರ್ಷಣೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
22 ವರ್ಷದ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ರಿಪನ್ ಮೊಂಡೋಲ್ ಮತ್ತು 29 ವರ್ಷದ ದಕ್ಷಿಣ ಆಫ್ರಿಕಾ ವೇಗಿ ತ್ಸೆಪೊ ನ್ಟುಲಿ ನಡುವಿನ ಮಾತಿನ ಚಕಮಕಿಯ ನಂತರ ಈ ಘಟನೆ ಸಂಭವಿಸಿದೆ. ಮಾತಿನ ಚಕಮಕಿ ನಡುವೆ ತಂಡದ ಇತರ ಆಟಗಾರರು ಈ ಚಕಮಕಿಯಲ್ಲಿ ತೊಡಗಿದರು.
ಅಂಪೈರ್ ಕಮ್ರುಝಾಮನ್ ಅವರು ಆಟಗಾರರನ್ನು ಸಮಧಾನ ಮಾಡಲು ಪ್ರಯತ್ನಿಸಿದರೂ, ನ್ಟುಲಿ ಹಲವು ಬಾರಿ ರಿಪನ್ ಅವರ ಹೆಲ್ಮೆಟ್ ಅನ್ನು ಎಳೆದರು. ನೋಡುತ್ತಿದ್ದ ಕೆಲವು ದಕ್ಷಿಣ ಆಫ್ರಿಕಾದ ಆಟಗಾರರು ಸಹ ಜಗಳ ಶುರು ಮಾಡಿದರು. ರಿಪನ್ ತನ್ನ ಬ್ಯಾಟಿಂಗ್ ಪಾಲುದಾರನ ಕಡೆಗೆ ಚಲಿಸುತ್ತಿದ್ದಂತೆ, ನ್ಟುಲಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗೆ ಹೊಡೆದಿದ್ದಾರೆ.
ಈ ಸರಣಿಯಲ್ಲಿ ಇದು ಮೊದಲ ಅಸಭ್ಯ ವರ್ತನೆಯ ಘಟನೆಯಲ್ಲ. ಈ ಹಿಂದೆ ರಾಜಶಾಹಿಯಲ್ಲಿ ನಡೆದ 50 ಓವರ್‌ಗಳ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಂಡಿಲೆ ಸಿಮೆಲಾನೆ ಮತ್ತು ಬಾಂಗ್ಲಾದೇಶದ ಜಿಶಾನ್ ಆಲಂ ಕೂಡ ತಮ್ಮ ವರ್ತನೆಗಾಗಿ ಅಮಾನತುಗೊಂಡಿದ್ದರು. ನಡೆಯುತ್ತಿರುವ ಈ ಟೆಸ್ಟ್ ಪಂದ್ಯವು ಸರಣಿಯ ಅಂತಿಮ ಪಂದ್ಯವಾಗಿದ್ದು, ಬಾಂಗ್ಲಾದೇಶ ಒಂದು ದಿನದ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ ಮತ್ತು ಮೊದಲ ನಾಲ್ಕು ದಿನಗಳ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.