Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > IPL 2025 ಪಂಜಾಬ್ ವಿರುದ್ಧ RCB 8 ವಿಕೆಟ್‌ಗಳ ಸುಲಭ ಜಯ, 8 ವರ್ಷ ಬಳಿಕ‌ ಫೈನಲ್‌ಗೆ
ಕರ್ನಾಟಕದೇಶಪ್ರಮುಖ

IPL 2025 ಪಂಜಾಬ್ ವಿರುದ್ಧ RCB 8 ವಿಕೆಟ್‌ಗಳ ಸುಲಭ ಜಯ, 8 ವರ್ಷ ಬಳಿಕ‌ ಫೈನಲ್‌ಗೆ

Share
2 Min Read
SHARE

newsics.com

ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳು ನಿರೀಕ್ಷಿಸಿದ್ದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಸಾಧಿಸಿದೆ.

ಐಪಿಎಲ್ 2025ರ (IPL 2025) ಕ್ವಾಲಿಫೈಯರ್ 1ರಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲು ಅದ್ಭುತ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 8 ವಿಕೆಟ್ಗಳ ಸುಲಭ ಜಯ ಸಾಧಿಸಿದೆ.

ಈ ಜಯದ ಮೂಲಕ 8 ವರ್ಷಗಳ ಬಳಿಕ ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸಿದೆ.

ಮೊದಲು ಪ್ರಚಂಡ ಬೌಲಿಂಗ್ ದಾಳಿ ನಡೆಸಿ ಪಂಜಾಬ್ ಕಿಂಗ್ಸ್ ತಂಡವನ್ನ ಕೇವಲ 101ಕ್ಕೆ ಆಲೌಟ್ ಮಾಡಿದ ಆರ್ಸಿಬಿ, 102 ರನ್ಗಳ ಸುಲಭದ ಗುರಿಯನ್ನ ಕೇವಲ 10 ಓವರ್ಗಳಲ್ಲಿ ತಲುಪುವ ಮೂಲಕ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಫಿಲ್ ಸಾಲ್ಟ್ ಅಜೇಯ 56 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದರು.
102 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತ್ತು. 3 ಓವರ್ಗಳಲ್ಲಿ 30 ರನ್ ಸೇರಿಸಿದ ಆರ್ಸಿಬಿ 4ನೇ ಓವರ್ನಲ್ಲಿ ಇನ್ಫಾರ್ಮ್ ಬ್ಯಾಟರ್ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. 12 ರನ್ಗಳಿಸಿದ್ದ ಕೊಹ್ಲಿ ಕೈಲ್ ಜೇಮಿಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಇಂಗ್ಲಿಸ್ಗೆ ಕ್ಯಾಚ್ ನೀಡಿ ಔಟ್ ಆದರು. ವಿಕೆಟ್ ಬಿದ್ದರೂ ಫಿಲ್ ಸಾಲ್ಟ್ ಮಾತ್ರ ತಮ್ಮ ಅಬ್ಬರದ ಆಟ ಮುಂದುವರಿಸಿದರು. 5ನೇ ಓವರ್ನಲ್ಲಿ 10 ರನ್ ಬಾರಿಸಿದ ಅವರು, ಕೊಹ್ಲಿ ಔಟಾದ ಓವರ್ ಮೇಡನ್ ಮಾಡಿದ್ದ ಜೇಮಿಸನ್ ಎಸೆದ ಪವರ್ ಪ್ಲೇನ ಕೊನೆಯ ಓವರ್ನಲ್ಲಿ 21 ರನ್ ಚಚ್ಚಿದರು.
ಫಿಲ್ ಸಾಲ್ಟ್ ಹಾಗೂ ಮಯಾಂಕ್ ಅಗರ್ವಾಲ್ 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 27 ಎಸೆತಗಳಲ್ಲಿ 54 ರನ್ ಸೇರಿಸಿದರು. ಮಯಾಂಕ್ 13 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 19 ರನ್ಗಳಿಸಿ ಪದಾರ್ಪಣೆ ಆಟಗಾರ ಮುಷೀರ್ ಖಾನ್ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಸಾಲ್ಟ್ಗೆ ಜೊತೆಯಾದ ರಜತ್ ಪಾಟೀದಾರ್ 3ನೇ ವಿಕೆಟ್ಗೆ 22 ರನ್ಗಳ ಮುರಿಯದ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಬೌಲಿಂಗ್ ಸ್ನೇಹಿ ವಿಕೆಟ್ನಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಫಿಲ್ ಸಾಲ್ಟ್ ಪಂಜಾಬ್ ಬೌಲರ್ಗಳನ್ನ ಬೆಂಡೆತ್ತಿದ್ದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಲ್ಟ್ ಒಟ್ಟಾರೆ 27 ಎಸೆತಗಳಲ್ಲಿ 6 ಬೌಂಡರಿಮ 3 ಸಿಕ್ಸರ್ಗಳ ಸಹಿತ ಅಜೇಯ 56 ರನ್ಗಳಿಸಿದರು. ನಾಯಕ ರಜತ್ ಪಾಟೀದಾರ್ ಮುಶೀರ್ ಖಾನ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಇನ್ನು 60 ಎಸೆತಗಳಿರುವಂತೆ ಆರ್ಸಿಬಿ ಗೆಲುವು ತಂದುಕೊಟ್ಟರು. ಅವರು 8 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್ ಸಹಿತ 15 ರನ್ಗಳಿಸಿದರು. ಪಂಜಾಬ್ ಕಿಂಗ್ಸ್ ಪರ ಕೈಲ್ ಜೇಮಿಸನ್ ಹಾಗೂ ಮುಶೀರ್ ಖಾನ್ ತಲಾ 1 ವಿಕೆಟ್ ಪಡೆದರು.
ಆರ್ಸಿಬಿ ಪಂಜಾಬ್ ತಂಡವನ್ನ 8 ವಿಕೆಟ್ಗಳಿಂದ ಮಣಿಸುವ ಮೂಲಕ 4ನೇ ಬಾರಿ ಫೈನಲ್ ಪ್ರವೇಶಿಸಿತು. 2009, 2011 ಹಾಗೂ 2016ರಲ್ಲಿ ಆರ್ಸಿಬಿ ಫೈನಲ್ ಪ್ರವೇಶಿಸಿತ್ತು. ಇದೀಗ ಐಪಿಎಲ್ನಲ್ಲಿ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 2009ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ, 2011ರಲ್ಲಿ ಸಿಎಸ್ಕೆ ವಿರುದ್ಧ ಹಾಗೂ 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಇದೀಗ ಜೂನ್ 3ರಂದು ಕ್ವಾಲಿಫೈಯರ್ 2ರಲ್ಲಿ ಗೆಲ್ಲುವ ತಂಡವನ್ನು ಮಣಿಸಿ 17 ವರ್ಷಗಳ ಪ್ರಶಸ್ತಿ ಬರವನ್ನ ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.

TAGGED:IPL 2025 RCB easily beat Punjab by 8 wicketsreach final after 8 years
Share This Article
Facebook Twitter Copy Link Print
Previous Article ಮೈದಾನದಲ್ಲೇ ಹೊಡೆದಾಡಿಕೊಂಡ ಕ್ರಿಕೆಟಿಗರು :ಬ್ಯಾಟರ್‌‌ ಮುಖಕ್ಕೆ ಪಂಚ್ ಕೊಟ್ಟ ಬೌಲರ್‌! ವೈರಲ್ ವಿಡಿಯೋ ನೋಡಿ.
Next Article Today’s prediction ಇಂದಿನ ರಾಶಿ ಭವಿಷ್ಯ, 30-05-2025, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?