newsics.com
ರಾಯಚೂರು: ಜಿಲ್ಲೆಯ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ಹೆದರಿಸಲು ಹೋದ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಕೊಂದು ಪಶು ಆಂಬುಲೆಬ್ಸ್‌ನಲ್ಲಿ ಹಾಕಿ ಸಾಗಿಸಿದ ಘಟನೆ ಭಾನುವಾರ ನಡೆದಿದೆ.
ಮೂವರ ಮೇಲೆ ದಾಳಿ ಮಾಡಿ ಕಾಣೆಯಾಗಿದ್ದ ಚಿರತೆ ಸ್ವಲ್ಪ ಹೊತ್ತಿನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ದಾಳಿ ನಡೆಸುವ ಭಯದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆಯೇ ಸಾರ್ವಜನಿಕರು ಚಿರತೆ ಕೊಂದು ಹಾಕಿದ್ದಾರೆ. ಈ ಮೂಲಕ ಜನರು ತಮ್ಮ ಆಕ್ರೋಶ ತೀರಿಸಿಕೊಂಡಿದ್ದಾರೆ.

ಬಳಿಕ ಪಶು ಆಂಬ್ಯುಲೆನ್ಸ್ನಲ್ಲಿ ಚಿರತೆ ಹಾಕಿ ಸಾಗಾಟ ಮಾಡಲಾಗಿದೆ. ದೇವದುರ್ಗ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓಡಿಸಲು ಹೋದ ಮೂವರ ಮೇಲೆ ಭಾನುವಾರ ಬೆಳಗ್ಗೆ ದಾಳಿ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಚಿರತೆ ಸೆರೆಗೆ ಕಾರ್ಯಾಚರಣೆ ಮಾಡಲಾಗಿತ್ತು.
ಪಿಎಂ ಆವಾಸ್ ಯೋಜನೆ ಮೊದಲ ಕಂತಿನ ಹಣ ಪಡೆದ 11 ವಿವಾಹಿತ ಮಹಿಳೆಯರು ಪ್ರೇಮಿಗಳೊಂದಿಗೆ ಪರಾರಿ!
ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ: ಆಗುಂಬೆ ಬಳಿ ಕೊಲೆ, ಆರೋಪಿ ಬಂಧನ