Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ನಿಜಕ್ಕೂ ಅಶ್ವಗಂಧ‌ ಗಿಡಮೂಲಿಕೆ ಲೈಂಗಿಕ ಹಾರ್ಮೋನ್‌ಗೆ ಹಾನಿ‌ ಮಾಡತ್ತಾ, ಗರ್ಭಪಾತಕ್ಕೆ ಕಾರಣವಾಗತ್ತಾ?
ಆರೋಗ್ಯದೇಶಪ್ರಮುಖ

ನಿಜಕ್ಕೂ ಅಶ್ವಗಂಧ‌ ಗಿಡಮೂಲಿಕೆ ಲೈಂಗಿಕ ಹಾರ್ಮೋನ್‌ಗೆ ಹಾನಿ‌ ಮಾಡತ್ತಾ, ಗರ್ಭಪಾತಕ್ಕೆ ಕಾರಣವಾಗತ್ತಾ?

Share
2 Min Read
SHARE

newsics.com

ನವದೆಹಲಿ: ಭಾರತೀಯ ಆಯುರ್ವೇದ ಪರಂಪರೆಯಲ್ಲಿ ಹಾಗೂ ಚಿಕಿತ್ಸಾ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದ ಅಶ್ವಗಂಧವನ್ನು ಡೆನ್ಮಾರ್ಕ್ ಸರ್ಕಾರ ನಿಷೇಧಿಸಿದೆ.

2020ರ ಮೇನಲ್ಲಿ ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ಕೊಟ್ಟ ವರದಿಯ ಆಧಾರದ ಮೇಲೆ ಈ ನಿರ್ಧಾರ ಹೊರಬಿದ್ದಿದೆ. ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪದಲ್ಲಿ ಅಶ್ವಗಂಧವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಈ ವರದಿಯಿಂದಾಗಿ ಇದೀಗ ಸ್ವಿಡನ್, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಫ್ರಾನ್ಸ್, ಟರ್ಕಿ ಹಾಗೂ ಯುರೋಪಿಯನ್ ಯೂನಿಯನ್‌ನಲ್ಲಿಯೂ ಕಳವಳ ವ್ಯಕ್ತವಾಗಿದೆ.

ಲೈಂಗಿಕ ಹಾರ್ಮೋನು ಮತ್ತು ಸಂತಾನೋತ್ಪತ್ತಿಯ ಮೇಲೆ ಅಶ್ವಗಂಧ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಶ್ವಗಂಧ ಗರ್ಭಪಾತಕ್ಕೂ ಕಾರಣವಾಗಲಿದೆ ಎಂದು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲ, ಅಶ್ವಗಂಧವು ಕೇಂದ್ರ ನರಮಂಡಲದ ಮೇಲೂ ಪರಿಣಾಮ ಬೀರಬಹುದು. ಥೈರಾಯ್ಡ್ ಗ್ರಂಥಿ ಮೇಲೆ ಹಾಗೂ ಲಿವರ್ ಸಮಸ್ಯೆ ಉಂಟುಮಾಡಬಹುದು ಎಂದು ಆರೋಪ ಮಾಡಲಾಗಿದೆ.

ಡೆನ್ಮಾರ್ಕ್ನ ನಿರ್ಧಾರಕ್ಕೆ ಮತ್ತು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಗೆ ಭಾರತದ ಆಯುಷ್ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

ವರದಿಯನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಆಯುಷ್ ಸಚಿವಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ವರದಿಯ ಸತ್ಯಾಸತ್ಯತೆ ಪರಿಶೀಲಿಸಲು ಆಯುಷ್ ಸಚಿವಾಲಯವು ಪದ್ಮಭೂಷಣ ಪ್ರೊ. ಡಾ ಶಿವಕುಮಾರ ಸರಿನ್, ಡಾ ರಾಜೇಶ್ ಖಡ್ಗವತ್, ಡಾ ಭೂಷಣ್ ಪಟವರ್ಧನ್ ಮತ್ತಿತರರ ಸಮಿತಿಯನ್ನು ರಚಿಸಿದೆ.

ಅಶ್ವಗಂಧದ ಸುರಕ್ಷತೆ ಬಗ್ಗೆ 400 ಪುಟಗಳ ದಾಖಲೆಗಳಿವೆ. ವರದಿಯಲ್ಲಿ ವೈಜ್ಞಾನಿಕ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ ಎಂದು ಡೆನ್ಮಾರ್ಕ್ ಮಾಡಿರುವ ಆರೋಪವನ್ನು ಆಯುಷ್ ಸಚಿವಾಲಯ ತಳ್ಳಿ ಹಾಕಿದೆ.

ಆಯುಷ್ ಸಚಿವಾಲಯದ ಪ್ರಕಾರ, ಭಾರತ ವಿಶ್ವದ ಅತಿದೊಡ್ಡ ಅಶ್ವಗಂಧ ಉತ್ಪಾದಕ ದೇಶ. ಒಂದು ವರ್ಷಕ್ಕೆ 4 ಸಾವಿರ ಟನ್ ಅಶ್ವಗಂಧದ ಬೇರುಗಳನ್ನು ಉತ್ಪಾದನೆ ಮಾಡುತ್ತದೆ. ವಿವಿಧ ದೇಶಗಳಿಗೆ ಅಶ್ವಗಂಧ ಪೂರೈಕೆ ಮಾಡುವ ಪೈಕಿ ಭಾರತದ್ದೇ ಶೇಕಡಾ 42ರಷ್ಟು ಕೊಡುಗೆ ಇದೆ. ಹೀಗಿರುವಾಗ ಡೆನ್ಮಾರ್ಕ್ ದೇಶದ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ‘ಸೈಂಟಿಫಿಕ್ ಜರ್ನಲ್ ಆಫ್ ಆಯುರ್ವೇದ ಆ್ಯಂಡ್ ಇಂಟಿಗ್ರೇಟಿವ್ ಮೆಡಿಸಿನ್’ ಕೂಡ ಅನುಮಾನ ವ್ಯಕ್ತಪಡಿಸಿದೆ.

https://www.newsics.com/2024/07/07/week-forecast-july-7-13-aries-irritability-illness-from-anger-pisces-students-study-abroad-dreams-come-true/

ನಮ್ಮ ಸೇನೆಗೆ ಸಿಗಲಿದೆ ಜೋರಾವರ್ ಟ್ಯಾಂಕ್ ಬಲ

ದಿನ ಭವಿಷ್ಯ 07-07-2024 ಸಿಂಹ- ವೃತ್ತಿಪರ ವ್ಯವಹಾರ ಲಾಭದಾಯಕ, ವೃಶ್ಚಿಕ- ಹಣಕಾಸಿನ ಸ್ಥಿತಿ ಸಾಧಾರಣ, ನಿಮ್ಮರಾಶಿ ಭವಿಷ್ಯದಲ್ಲೇನಿದೆ?

ಮುದ್ದಿನ ನಾಯಿಗೆ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ! ವೈರಲ್ ವಿಡಿಯೋ ನೋಡಿ

ಚಾಮುಂಡೇಶ್ವರಿ ದೇವಿಗೆ ತನ್ನ ಮನೆಯನ್ನೇ ಅರ್ಪಿಸಿದ ಶಾರದಾ!

ಅಬ್ಬಬ್ಬಾ! ಊಟದ ಬಳಿಕ ಪಾನ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ?

TAGGED:Does the herb ashwagandha really harm sex hormones and cause miscarriage?
Share This Article
Facebook Twitter Copy Link Print
Previous Article ವಾರ ಭವಿಷ್ಯ (ಜುಲೈ 7- 13) ಮೇಷ- ಕಿರಿಕಿರಿ- ಕೋಪದಿಂದ ಅನಾರೋಗ್ಯ, ಮೀನ- ವಿದ್ಯಾರ್ಥಿಗಳ ಕನಸು ನನಸು, ನಿಮ್ಮ ವಾರ ಭವಿಷ್ಯದಲ್ಲೇನಿದೆ?
Next Article ಬೆಂಗಳೂರು ಆಟೋ‌ ಚಾಲಕರಿಗೆ ಭಾರೀ ಶಾಕ್: ಒಂದೇ ದಿನ 800 ಆಟೋಗಳಿಗೆ ದಂಡ, 3.48 ಲಕ್ಷ ರೂ. ವಸೂಲಿ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?