ನಮ್ಮ ಸೇನೆಗೆ ಸಿಗಲಿದೆ ಜೋರಾವರ್ ಟ್ಯಾಂಕ್ ಬಲ

newsics.com ನವದೆಹಲಿ: ಭಾರತೀಯ ಸೇನೆಗೆ ಸ್ವದೇಶಿ ನಿರ್ಮಿತ ಜೋರಾವರ್ ಲಘು ಟ್ಯಾಂಕ್‌ನ ಬಲ ಸದ್ಯದಲ್ಲೇ ಲಭ್ಯವಾಗಲಿದೆ. ಎರಡು ವರ್ಷಗಳ ಅತಿ ಕಡಿಮೆ ಅವಯಲ್ಲಿ ಈ ಟ್ಯಾಂಕ್ ಅಭಿವೃದ್ಧಿಪಡಿಸಲಾಗಿದ್ದು, ಶನಿವಾರ ಗುಜರಾತ್‌ನ ಹಾಜಿರಾದಲ್ಲಿರುವ ಎಲ್‌ ಆ್ಯಂಡ್‌ ಟಿ ಸ್ಥಾವರದಲ್ಲಿ ಅನಾವರಣ ಮಾಡಲಾಗಿದೆ. ಈ ಟ್ಯಾಂಕನ್ನು ಚೀನಾ ಗಡಿ ಅಂದರೆ ಲಡಾಖ್‌ನಲ್ಲಿ ನಿಯೋಜನೆ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ. ಈ ಟ್ಯಾಂಕನ್ನು ಡಿಆರ್‌ಡಿಒ ಮತ್ತು ಎಲ್‌ ಆ್ಯಂಡ್‌ ಟಿ ಒಟ್ಟಿಗೆ ಸೇರಿ ಅಭಿವೃದ್ಧಿಪಡಿಸುತ್ತಿವೆ. ಶನಿವಾರ ಇದನ್ನು ಹಾಜಿರಾದಲ್ಲೇ ಪರಿಶೀಲನೆಗೊಳಪಡಿಸಲಾಗಿದೆ. … Continue reading ನಮ್ಮ ಸೇನೆಗೆ ಸಿಗಲಿದೆ ಜೋರಾವರ್ ಟ್ಯಾಂಕ್ ಬಲ