newsics.com
ಬೆಂಗಳೂರು: 2025-26ನೇ ಸಾಲಿನ ಸಿಇಟಿ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಫಲಿತಾಂಶ ಪ್ರಕಟಿಸಿದರು.
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಭವೇಶ್ ಜಯಂತಿ ಮೊದಲ ಸ್ಥಾನ ಪಡೆದಿದ್ದಾರೆ. ಕೃಷಿಯಲ್ಲಿ ಅಕ್ಷಯ್ ಎಂ ಹೆಗಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ವರ್ಷ ನಕಲಿ ಅಭ್ಯರ್ಥಿಗಳ ಹಾವಳಿಗೆ ಬ್ರೇಕ್ ಹಾಕಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಈ ವರ್ಷ 3,11,991 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು.
ಕಳೆದ ತಿಂಗಳ ಏಪ್ರಿಲ್ 16 ಮತ್ತು 17 ರಂದು ಸಿಇಟಿ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗಿತ್ತು. ದ್ವಿತೀಯ ಪಿಯುಸಿ ಪರೀಕ್ಷೆ -2ರ ಫಲಿತಾಂಶ ಘೋಷಣೆ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸುವ ನಿರ್ಧಾರವನ್ನು ಕೆಇಎ ಮಾಡಿದ್ದು, ಅದರಂತೆ ಶನಿವಾರ ಸಿಇಟಿ ರಿಸಲ್ಟ್ ಪ್ರಕಟಿಸಿದೆ.
ಎಂಜಿನಿಯರಿಂಗ್
1. ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
2. ಸಾತ್ವಿಕ್ ಬಿರಾದರ್- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಉತ್ತರಹಳ್ಳಿ
3. ದಿನೇಶ್ ಅರುಣಾಚಲಂ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
ಕೃಷಿ
1. ಅಕ್ಷಯ್ ಹೆಗಡೆ – ಆಳ್ವಾಸ್ ಕಾಲೇಜ್ ಮೂಡಬಿದ್ರೆ
2. ಶಶಿ ಪಂಡಿತ್ – ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
3. ಸುಚಿತ್ ಪಿ. ಪ್ರಸಾದ್ – ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಪಶುಸಂಗೋಪನೆ
1. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
2. ಆತ್ರೇಯ – NPS. ಎಚ್ಎಸ್ ಆರ್ ಲೇಔಟ್
3. ಸಫಲ್.ಎಸ್. ಶೆಟ್ಟಿ – ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಫಾರ್ಮ-ಡಿ
1. ಆತ್ರೇಯ – ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
2. ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
3. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
ನರ್ಸಿಂಗ್
1. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
2. ಆತ್ರೇಯ – ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
3. ಸಫಲ್ ಎಸ್. ಶೆಟ್ಟಿ – ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಬಿ- ಫಾರ್ಮ್
1. ಆತ್ರೇಯ – ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
2. ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
3. ಹರೀಶ್ ರಾಜ್ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಕೆಇಎ ವೆಬ್‌ಸೈಟ್‌ನಲ್ಲಿ ವಿಸ್ತೃತ ಫಲಿತಾಂಶ ಪ್ರಕಟವಾಗಲಿದೆ.
CET results tomorrow ನಾಳೆ ಸಿಇಟಿ ರಿಸಲ್ಟ್: ಎಲ್ಲೆಲ್ಲಿ ಸಿಗತ್ತೆ ಫಲಿತಾಂಶ?