newsics.com
ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಕುಟುಂಬಸ್ಥರ ನೇಮೋತ್ಸವದಲ್ಲಿ ಭಾಗಿಯಾಗಿ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. 42ರ ಹರೆಯದ ರಕ್ಷಿತ್ ಮದುವೆ ಯಾವಾಗ, ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗಳು ಎದುರಾಗಿವೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದೆಲ್ಲಿ ಕಾಣೆಯಾದ್ರು ಅಂತ ಫ್ಯಾನ್ಸ್ ಹುಡುಕಾಡ್ತಾ ಇರೋ ಹೊತ್ತಲ್ಲೇ ರಕ್ಷಿತ್ ಉಡುಪಿಯಲ್ಲಿ ಪ್ರತ್ಯಕ್ಷ ಆಗಿದ್ದಾರೆ.
ತಂದೆ, ತಾಯಿ ಜೊತೆಗೆ ಅಲೆವೂರು ದೊಡ್ಡಮನೆ ಕುಟುಂಬಸ್ಥರ ಹರಕೆಯ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ.
ತಮ್ಮ ಕುಟುಂಬಸ್ಥರ ಮನೆಯಲ್ಲಿ ನಡೆವ ದೈವ ಸಮಾರಾಧನೆಗಳಿಗೆ ರಕ್ಷಿತ್ ತಪ್ಪದೇ ಹಾಜರಾಗ್ತಾರೆ. ಈ ಸಾರಿಯೂ ನಡುರಾತ್ರಿ ನಡೆದ ನೇಮೋತ್ಸವದಲ್ಲಿ ಭಾಗಿಯಾಗಿ ಪಂಜುರ್ಲಿ ದೈವದ ಆಶಿರ್ವಾದ ಪಡೆದುಕೊಂಡಿದ್ದಾರೆ.
ರಕ್ಷಿತ್ ಗೀಗ 42ರ ಹರೆಯ. ಸಹಜವಾಗೇ ರಕ್ಷಿತ್ ತಂದೆ ತಾಯಿ ಬೇಗ ಮಗ ಮದುವೆಯಾಗಲಿ, ಲೈಪ್ ನಲ್ಲಿ ಸೆಟಲ್ ಆಗಲಿ ಅಂತ ಬಯಸ್ತಾ ಇದ್ದಾರೆ. ಆದ್ರೆ ಅದ್ಯಾಕೋ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆದರೂ ರಕ್ಷಿತ್‌ಗೆ ಕಂಕಣ ಬಲ ಮಾತ್ರ ಕೂಡಿ ಬರ್ತಾ ಇಲ್ಲ.
Government Hospital ಸರ್ಕಾರಿ ಆಸ್ಪತ್ರೆ ಹೊರಗಿನ ಜನ ಔಷಧಿ ಕೇಂದ್ರಗಳು ಮುಚ್ಚುತ್ತವೆಯೇ?