newsics.com
ನವದೆಹಲಿ: ಪಾಕ್ ಪರ ಗೂಢಚಾರಿಕೆ ಮಾಡುತ್ತಿದ್ದ ಭಾರತದ ಆರು ಯೂ ಟ್ಯೂಬರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯೂ ಟ್ಯೂಬರ್ ಹೆಸರಿನಲ್ಲಿ ಭಾರತದ ಮಾಹಿತಿ ಕದ್ದು ಪಾಕಿಸ್ತಾನಕ್ಕೆ ಮಾರುವ ದೇಶದ್ರೋಹಿ ಕೆಲಸ ಮಾಡುತ್ತಿದ್ದ ಜ್ಯೋತಿ ಮಲ್ಲೋತ್ರಾ ಸೇರಿ ಆರು ಯೂ ಟ್ಯೂಬರ್‌ಗಳನ್ನು ಪೊಲೀಸರು ಶನಿವಾರ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಜ್ಯೋತಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಗೂಢಚರ್ಯ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಿದ್ದಾರೆ.
ಜ್ಯೋತಿ ಮಿಶ್ರಾ ಯೂ ಟ್ಯೂಬ್ ಚಾನೆಲ್‌ಗೆ ರೆಕಾರ್ಡಿಂಗ್ ಮಾಡುವ ನೆಪದಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳು, ಧಾರ್ಮಿಕ ಸ್ಥಳಗಳಿಗೆ ತೆರಳಿ ವಿಡಿಯೋ ಮಾಡುತ್ತಿದ್ದಳು.
ಈಕೆಗೆ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರೊಂದಿಗೆ ಸಂಪರ್ಕವಿರುವುದು ಇದೀಗ ಪತ್ತೆಯಾಗಿದೆ. ಆತನೊಂದಿಗೆ ಭಾರತದ ಸೂಕ್ಷ್ಮ ಮಾಹಿತಿಗಳನ್ನು ಜ್ಯೋತಿ ಹಂಚಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಜ್ಯೋತಿ ಮೂಲತಃ ಹರ್ಯಾಣದವಳು ಎಂದು ತಿಳಿದುಬಂದಿದೆ. ಟ್ರಾವೆಲ್ ವಿತ್ ಜೋ ಎಂಬ ಯೂ ಟ್ಯೂಬ್ ಚಾನೆಲ್ ಹೊಂದಿದ್ದಾಳೆ. 2023ರಲ್ಲಿ ಪಾಕಿಸ್ತಾನಿ ವೀಸಾ ಪಡೆದು ಆ ದೇಶಕ್ಕೆ ಭೇಟಿ ನೀಡಿದ್ದ ಆಕೆ ಅಲ್ಲಿನ ಅಧಿಕಾರಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ.
Shashi Tharoor ಕಾಂಗ್ರೆಸ್ ನಾಯಕ ಶಶಿ ತರೂರ್‌ಗೆ ಮಹತ್ವದ ಜವಾಬ್ದಾರಿ ನೀಡಲು ಮುಂದಾದ ಕೇಂದ್ರ ಸರ್ಕಾರ