Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇದು ಕಪಿಚೇಷ್ಟೆಯಲ್ಲ, ಈ ರೆಸ್ಟೋರೆಂಟ್‌ನಲ್ಲಿ ಕೋತಿಗಳೇ ವೇಯ್ಟರ್ಸ್! ನಂಬಲಾಗ್ತಿಲ್ವಾ, ಫೋಟೋಸ್ ನೋಡಿ
ಪ್ರಮುಖವಿದೇಶವೈರಲ್

ಇದು ಕಪಿಚೇಷ್ಟೆಯಲ್ಲ, ಈ ರೆಸ್ಟೋರೆಂಟ್‌ನಲ್ಲಿ ಕೋತಿಗಳೇ ವೇಯ್ಟರ್ಸ್! ನಂಬಲಾಗ್ತಿಲ್ವಾ, ಫೋಟೋಸ್ ನೋಡಿ

Share
1 Min Read
SHARE

newsics.com

ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳು ಮನುಷ್ಯರಾಗಿರುತ್ತಾರೆ. ಆದರೆ, ಇತ್ತೀಚೆಗೆ ರೊಬೊಟ್‌ಗಳು ಸಹ ವೇಟರ್‌ಗಳ ಕೆಲಸ ಮಾಡುತ್ತಿವೆ.

ಆದರೆ ಜಪಾನ್‌ನ ರೆಸ್ಟೋರೆಂಟ್‌ನಲ್ಲಿ ಮನುಷ್ಯರ ಬದಲಿಗೆ ಕೋತಿಗಳೇ ಅತಿಥಿಗಳಿಗೆ ಆಹಾರ ಬಡಿಸುತ್ತವೆ. ಈ ರೆಸ್ಟೋರೆಂಟ್‌ನ ಮಾಲೀಕರು ಕೋತಿಗಳಿಗೆ ಸಂಬಳವನ್ನೂ ನೀಡುತ್ತಾರೆ.

ಜಪಾನ್‌ನಲ್ಲಿ ಜನರು ಮಾತ್ರವಲ್ಲ, ಪ್ರಾಣಿಗಳೂ ಕಷ್ಟಪಟ್ಟು ಕೆಲಸ ಮಾಡುತ್ತವೆ. ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳಾಗಿ ಕೆಲಸ ಮಾಡುವ ಕೋತಿಗಳು ಇಲ್ಲಿ ಸಂಬಳವನ್ನು ಪಡೆಯುತ್ತವೆ.

ಜಪಾನ್‌ನ ‘ಕಯಾಬುಕಿಯಾ’ ಎಂಬ ರೆಸ್ಟೋರೆಂಟ್‌ನಲ್ಲಿ ಎರಡು ಕೋತಿಗಳನ್ನು ವೇಟರ್‌ಗಳಾಗಿ ನೇಮಿಸಲಾಗಿದೆ. ಈ ಕೋತಿಗಳು ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಆಹಾರ ಬಡಿಸುವ ಕೆಲಸ ಮಾಡುತ್ತವೆ. ಈ ಕೋತಿಗಳನ್ನು ನೋಡಲು ಜನರು ದೂರದಿಂದ ಬರುತ್ತಾರೆ. ಜತೆಗೆ ಕೋತಿಗಳು ಬಡಿಸಿದ ಆಹಾರವನ್ನು ತಿನ್ನಲು ಸಹ ತುಂಬಾ ಇಷ್ಟಪಡುತ್ತಾರೆ.

ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಎರಡು ಕೋತಿಗಳ ಹೆಸರು ಯಾಚಾನ್ ಮತ್ತು ಫುಕು-ಚಾನ್. ಈ ಕೋತಿಗಳು ಸಾಂಪ್ರದಾಯಿಕ ಜಪಾನೀಸ್ ಉಡುಗೆ (ಯುಕಾಟಾ) ಧರಿಸುತ್ತವೆ. ಇದು ಗ್ರಾಹಕರಿಗೆ ಇನ್ನಷ್ಟು ಮನರಂಜನೆಯ ಅನುಭವ ನೀಡುತ್ತದೆ.

ಈ ಮೂಲಕ ಟೋಕಿಯೋದ ಕಯಾಬುಕಿಯಾ ರೆಸ್ಟೋರೆಂಟ್‌ನ ಮಾಲೀಕರು ಕೋತಿಗಳು ಎಷ್ಟು ಬುದ್ಧಿವಂತವಾಗಿವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಜಪಾನ್‌ನಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹವರನ್ನು ಕಠಿಣವಾಗಿ ಶಿಕ್ಷಿಸುವ ವ್ಯವಸ್ಥೆಯಿದೆ
ರೆಸ್ಟೋರೆಂಟ್‌ನ ಮಾಲೀಕರು ಸರ್ಕಾರದಿಂದ ಅನುಮತಿ ಪಡೆದು, ಮನುಷ್ಯರ ಬದಲಿಗೆ ಕೋತಿಗಳನ್ನು ನೇಮಿಸಿದ್ದಾರೆ. ಕೋತಿಗಳು ವಾರಕ್ಕೆ ಎರಡು ದಿನ ಮಾತ್ರ ಕೆಲಸ ಮಾಡುತ್ತವೆ.

ರೆಸ್ಟೋರೆಂಟ್ ಮಾಲೀಕರು ಕೋತಿಗಳಿಗೆ ಉತ್ತಮ ಆರೈಕೆ, ಆಹಾರ, ಮತ್ತು ಪ್ರೀತಿಯನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ಈ ಕೋತಿಗಳು ಗ್ರಾಹಕರಿಗೆ ಸಂತೋಷವನ್ನು ತಂದುಕೊಡುತ್ತವೆ ಮತ್ತು ರೆಸ್ಟೋರೆಂಟ್‌ಗೆ ವಿಶಿಷ್ಟ ಗುರುತನ್ನು ನೀಡಿವೆ ಎಂದು ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಯಾಬುಕಿಯಾ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಕೋತಿಗಳಿಗೆ ಸಂಬಳವಾಗಿ ತಾಜಾ ಬಾಳೆಹಣ್ಣುಗಳು ಮತ್ತು ಬೇಯಿಸಿದ ಸೋಯಾ ಬೀನ್ಸ್ (ಗ್ರಾಹಕರಿಂದ ಟಿಪ್ ಆಗಿ) ನೀಡಲಾಗುತ್ತದೆ.

ಜಪಾನ್‌ನ ಕಾನೂನಿನ ಪ್ರಕಾರ, ಪ್ರಾಣಿಗಳಿಗೆ ನಗದು ಸಂಬಳ ನೀಡುವುದಕ್ಕೆ ಬದಲಾಗಿ ಆಹಾರವನ್ನೇ ಪ್ರತಿಫಲವಾಗಿ ನೀಡಲಾಗುತ್ತಿದೆ.

News: ನಮಗೆ ಪುರುಷರ ಅಗತ್ಯವಿಲ್ಲವೆಂದು ಮದುವೆಯಾದ ಇಬ್ಬರು ಸ್ನೇಹಿತೆಯರು

Gang rape ಮಾತುಬಾರದ, ಕಿವಿ ಕೇಳದ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ!

TAGGED:monkeys are the waiters in this restaurant!This is not a prank
Share This Article
Facebook Twitter Copy Link Print
Previous Article News: ನಮಗೆ ಪುರುಷರ ಅಗತ್ಯವಿಲ್ಲವೆಂದು ಮದುವೆಯಾದ ಇಬ್ಬರು ಸ್ನೇಹಿತೆಯರು
Next Article Sampath found dead ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ಶವವಾಗಿ ಪತ್ತೆ, ಕೊಲೆ ಶಂಕೆ

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?