newsics.com
ಬೆಂಗಳೂರು: ಕಾಮಿಡಿ ಕಿಲಾಡಿಗಳು ಸೀಸನ್-3 ರ ವಿಜೇತ ರಾಕೇಶ್ ಪೂಜಾರಿಯವರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದು, ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಈ ಬೆನ್ನಲ್ಲೇ ಕಾಂತಾರ ಸಿನಿಮಾ ತಂಡವು ರಾಕೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ನಟ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ್ದ ಕಾಂತಾರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಈ ಸಿನಿಮಾದಲ್ಲಿ ರಾಕೇಶ್ ಪೂಜಾರಿ ಕೂಡ ಅಭಿನಯಿಸಿದ್ದರು. ಸದ್ಯ ಕಾಂತಾರ ಚಾಪ್ಟರ್-1 ರ ಶೂಟಿಂಗ್ ನಡೆಯುತ್ತಿದೆ. ಇಂತಹ ಸಮಯದಲ್ಲೇ ಕಾಂತಾರ ನಟ ರಾಕೇಶ್ ಪೂಜಾರಿ ಸಾವು ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ.
ರಾಕೇಶ್ ಪೂಜಾರಿ ಅತ್ಯಂತ ಬಡ ಕುಟುಂಬದಿಂದ ಬಂದವರಾಗಿದ್ದು, ತಂಗಿಯ ಮದುವೆ ಮಾಡಬೇಕು ಹಾಗೆಯೇ ಅಮ್ಮನಿಗೆ ಆಸರೆಯಾಗಿ ಇರಬೇಕು ಎಂಬ ಕನಸು ಕಂಡಿದ್ದರು. ಆದರೆ ಅವರ ಬದುಕಿನಲ್ಲಿ ವಿಧಿ ಅಟ್ಟಹಾಸವನ್ನೇ ಮೆರೆದಿದಿದೆ. ರಾಕೇಶ್ ಪೂಜಾರಿ ಅಭಿಮಾನಿಗಳು ಕೂಡ ಆಘಾತದಲ್ಲಿ ಇದ್ದಾರೆ. ಇದೇ ಸಮಯದಲ್ಲಿ ಕಾಂತಾರ ಸಿನಿಮಾ ತಂಡದಿಂದ 1 ಕೋಟಿ ರೂ. ಪರಿಹಾರವನ್ನು ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ.
ರಾಕೇಶ್ ಪೂಜಾರಿ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.