newsics.com
ಮನುಷ್ಯನಿಗೆ ಲೋ ಬಿಪಿ ಇದ್ದರು ಡೇಂಜರ್.. ಹೈ ಬಿಪಿ ಇದ್ದರು ಡೇಂಜರ್. ಹೀಗಾಗಿಯೇ ಬಿಪಿಯನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಹೆಚ್ಚು ಕೋಪ ಮಾಡಿಕೊಳ್ಳಬಾರದು. ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಲೋ ಬಿಪಿ ಇದ್ದರಂತು ಯಾವಾಗ ಎಲ್ಲಿ ಬೀಳ್ತಾರೆ ಗೊತ್ತಾಗಲ್ಲ.
ಹೈಬಿಪಿ ಇದ್ದರೆ ಪ್ರಾಣಕ್ಕೆ ಅಪಾಯ. ಹೀಗಾಗಿ ಬಿಪಿ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಹೈ ಬಿಪಿ ಇದ್ದರೆ, ತಕ್ಷಣ ಕಡಿಮೆಯಾಗಬೇಕು ಅಂದ್ರೆ ನಿಮ್ಮ ರೆಗ್ಯುಲರ್ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಯನ್ನು ಅನುಸರಿಸಿ.
* ಬಾಳೆಹಣ್ಣು ಎಲ್ಲರಿಗೂ ಗೊತ್ತು ಅಲ್ವಾ. ಇದು ಅಜೀರ್ಣಕ್ರಿಯೆ ಹೊಂದಿರುವವರಿಗೆ ಬೆಸ್ಟ್ ಮದ್ದು ಅನ್ನೋದು ಗೊತ್ತು. ಬರೀ ಜೀರ್ಣಕ್ರಿಯೆ ಸಹಾಯ ಮಾಡೋದಲ್ಲ, ಹೈ ಬಿಪಿ ಕಂಟ್ರೋಲ್ ಮಾಡುವುದಕ್ಕೂ ಉಪಯೋಗಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್ ಜಾಸ್ತಿ ಒರುವ ಕಾರಣ ಕಿಡ್ನಿಯಲ್ಲಿರುವ ಸೋಡಿಯಂ ಅನ್ನು ಕಂಟ್ರೋಲ್ ಮಾಡುತ್ತೆ. ಆಗ ದೇಹದಲ್ಲಿನ ರಕ್ತದೊತ್ತಡ ಕಡಿಮೆಯಾಗುತ್ತದೆ.
* ಡಾರ್ಕ್ ಚಾಕ್ಲೆಟ್ ಹಲವು ಕಾಯಿಲೆಗಳಿಗೆ ಔಷಧವಿದ್ದಂತೆ ಇದರಲ್ಲಿ ಹೆಚ್ಚಾಗಿ ಮೆಗ್ನೀಸಿಯಂ ಹಾಗೂ ಫ್ಲಾವನಮ್ಸ್ ಇರುತ್ತೆ. ಇದು ಕೂಡ ಬಿಪಿಯನ್ನು ಕಂಟ್ರೋಲ್ ನಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ.
* ಬಿಟ್ರೂಟ್ ಕೂಡ ಬಿಪಿಯನ್ನ ಕಂಟ್ರೋಲ್ ನಲ್ಲಿಡುತ್ತೆ. ಇದರ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ಇಂಪ್ರೂವ್ ಮಾಡುತ್ತೆ. ಹೀಗಾಗಿ ವಾರದಲ್ಲಿ ಎರಡ್ಮೂರ ಸಲವಾದರೂ ಬಿಟ್ರೂಟ್ ಜ್ಯೂಸ್ ಕುಡಿಯುವುದು ಒಳ್ಳೆಯದು.
* ದಾಳಿಂಬೆಯನ್ನ ರಕ್ತ ಅಭಿವೃದ್ಧಿ ಆಗುವುದಕ್ಕೂ ತಿನ್ನಿ ಎಂಬ ಸಲಹೆಗಳನ್ನ ಕೇಳಿಯೇ ಇರ್ತೀವಿ. ಈ ದಾಳಿಂಬೆ ಹಣ್ಣನ್ನ ತಿನ್ನುವುದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.
* ಶುಂಠಿ ಕೆಲವು ರೋಗಗಳಿಗೆ ಮದ್ದು ಅಂತಾರೆ. ರಕ್ತದೊತ್ತಡಕ್ಕೂ ಮದ್ದು. ಹೀಗಾಗಿ ಶುಂಠಿಯನ್ನು ದಿನನಿತ್ಯದ ಆಹಾರದಲ್ಲಿ ಸೇವನೆ ಮಾಡಿ.