newsics.com
ಬೆಂಗಳೂರು : ಚಿನ್ನ, ಬೆಳ್ಳಿ, ಬೆಲೆ ಬಾಳುವ ವಸ್ತುಗಳಿಗೆ ಜನರು ಕನ್ನ ಹಾಕೋದನ್ನು ನೋಡಿದ್ದೇವೆ. ಆದ್ರೆ ಇಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಅಪ್ರಾಪ್ತ ಬಾಲಕಿ ಸೇರಿಕೊಂಡು ಬೆಕ್ಕನ್ನು ಕದ್ದಿದ್ದಾರೆ.
ಹೌದು, ಬೆಂಗಳೂರಿನ ಕಮ್ಮನಹಳ್ಳಿಯ ಓಲ್ಡ್ ಚರ್ಚ್ ರಸ್ತೆಯಲ್ಲಿರುವ ನಿವಾಸಿಯೊಬ್ಬರ ಮನೆಯಲ್ಲಿ ಬೆಕ್ಕು ಕಳ್ಳತನವಾಗಿದೆ. ಯುವತಿಯೊಬ್ಬಳು ಬೆಕ್ಕಿನ ಹುಡುಕಾಟಕ್ಕಾಗಿ ಇನ್ಸ್ಟಾದಲ್ಲಿ ಪೇಜ್ ಕ್ರಿಯೇಟ್ ಮಾಡಿ ಕಳ್ಳಿಯರ ಫೋಟೋ ಶೇರ್ ಮಾಡಿದ್ದಾರೆ.
.Please Identify 3 Girls’ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿದ್ರು. ಕಮ್ಮನಹಳ್ಳಿಯ ಓಲ್ಡ್ ಚರ್ಚ್ ರಸ್ತೆಯಲ್ಲಿರುವ ಮನೆಯ ಫಸ್ಟ್ ಫ್ಲೋರ್ ನಲ್ಲಿ ಇಬ್ಬರು ಮಹಿಳೆಯರು ಸೇರಿ ಬೆಕ್ಕನ್ನು ಕದ್ದಿದ್ದಾರೆ. ಈ ಸಿಸಿಟಿವಿ ದೃಶ್ಯವನ್ನು ಸಾಕ್ಷಿಯಾಗಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಬೆಕ್ಕನ್ನು ಮರಳಿ ಹಿಂದಿರುಗಿಸಲು ಯುವತಿ ಮನವಿ ಮಾಡಿದ್ದಾಳೆ.