newsics.com
ಮದುವೆ ಅಂದ್ಮೇಲೆ ಡ್ಯಾನ್ಸ್, ಹಾಡು, ಮೋಜು-ಮಸ್ತಿ, ತರ್ಲೆ ತಮಾಷೆ ಇವೆಲ್ಲವೂ ಇರುತ್ತವೆ. ಅದರಲ್ಲೂ ಮದುವೆ ಸಮಾರಂಭಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ವಧು-ವರರ ನೃತ್ಯ ಪ್ರದರ್ಶನವನ್ನು ನೋಡುವುದೇ ಕಣ್ಣಿಗೊಂದು ಹಬ್ಬ ಇದ್ದಂತೆ. ವಿವಾಹ ಸಮಾರಂಭಗಳಲ್ಲಿ ವಧು-ವರರ ನೃತ್ಯ ಪ್ರದರ್ಶನಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಅದೇ ರೀತಿ ಮದುಮಗನ ಡ್ಯಾನ್ಸ್ ನೋಡಿ ಮದುಮಗಳು ನಾಚಿ ನೀರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
vipin.kumar1764 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವರನು ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ವಧುವಿನ ಹತ್ತಿರ ಹೋಗಿ ಡಾನ್ಸ್ ಮಾಡಲು ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೇ ವಧುವಿಗೂ ಡಾನ್ಸ್ ಮಾಡುವಂತೆ ಹೇಳಿದ್ದು, ಆಕೆ ನಾಚಿ ನೀರಾಗಿದ್ದಾಳೆ. ಆದರೆ ಈ ವಿಡಿಯೋದಲ್ಲಿ ಮದುಮಗನು ಭರ್ಜರಿ ಸ್ಟೆಪ್ ಹಾಕಿದ್ದು, ಕುಟುಂಬಸ್ಥರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವರನ ಡಾನ್ಸನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವೊಂದು 2.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ವರನ ಡಾನ್ಸ್ ಗೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನಾಡಿದ್ದಾರೆ.
https://www.instagram.com/reel/DI_B98ypfvg/?igsh=MXkwNnRldTJrMmp4Nw==