newsics.com
ಬೆಂಗಳೂರು: ಮದುವೆ ಮನೆಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯನ್ನು ನೇರಪ್ರಸಾರ ಮಾಡಲಾಗಿತ್ತು.
ಆರ್‌ಸಿಬಿ ಅಭಿಮಾನಿಗಳು ಪಂದ್ಯ ವೀಕ್ಷಿಸುವಂತೆ ಮಾಡಲು ಆರತಕ್ಷತೆ ಕಾರ್ಯಕ್ರಮದಲ್ಲೇ ದೊಡ್ಡ ಸ್ಕ್ರೀನ್‌ನಲ್ಲಿ ಪಂದ್ಯವನ್ನು ನೇರ ಪ್ರಸಾರ ಮಾಡಲಾಗಿತ್ತು
ಶನಿವಾರದ ಪಂದ್ಯ ಅಂತೂ ಕೊನೆಯ ಎಸೆತವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಲು 15 ರನ್ ಬೇಕಿದ್ದರೆ ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಲು ಚೆನ್ನೈಗೆ 4 ರನ್‌ಗಳ ಅಗತ್ಯವಿತ್ತು. ಯಶ್ ದಯಾಳ್ ಎಸೆದ ಕೊನೆಯ ಎಸೆತದಲ್ಲಿ ಶಿವಂ ದುಬೆ 1 ರನ್ ಓಡುತ್ತಿದ್ದಂತೆ ಹಾಲ್‌ನಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿ ಜೈ ಆರ್‌ಸಿಬಿ ಎಂದು ಘೋಷಣೆ ಕೂಗಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಹೆಚ್ಚು ಹರಿದಾಡುತ್ತಿದೆ.
https://www.instagram.com/reel/DJM_zELtfvd/?igsh=MWNqNHBubndnbW1qcg==