newsics.com
ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಬೇಕು ಹೌದು, ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನವೆಂಬುವುದು ತುಂಬಾ ದುಬಾರಿಯಾಗಿದೆ. ಮಧ್ಯಮ ವರ್ಗದವರು, ಬಡವರು ಮುಟ್ಟದ ರೀತಿಯಲ್ಲಿ ಬೆಲೆ ಏರಿಕೆ ಕಂಡಿದೆ. ಆದರೆ ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ. ನೀವು ಕೂಡ ಹಬ್ಬಕ್ಕೆ ಸ್ವಲ್ಪನಾದ್ರೂ ಚಿನ್ನ ಖರೀದಿಸಬೇಕು ಎಂಬ ಪ್ಲ್ಯಾನ್‌ನಲ್ಲಿದ್ದರೆ ಇಂದು ರೇಟ್ ಎಷ್ಟಿದೆ ನೋಡೋಣ ಬನ್ನಿ.
24 ಕಾರೆಟ್ ಚಿನ್ನ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಕಂಡಿದೆ. ಇಂದಿನ 24 ಕಾರೆಟ್ ಚಿನ್ನ ಟ್ರೆಡಿಂಗ್ ಬೆಲೆ ₹97,900 ರೂಪಾಯಿಂದ ಆರಂಭಗೊಂಡಿದೆ ಎಂದು ಗುಡ್‌ರಿಟರ್ನ್ ವೆಬ್‌ಸೈಟ್ ಹೇಳಿದೆ. ಇನ್ನು 99,900 ರೂಪಾಯಿ ಟ್ರೇಡ್‌ನೊಂದಿಗೆ ಆರಂಭಗೊಂಡಿದ್ದ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ.
ಇನ್ನು 22 ಕಾರೆಟ್ 10 ಗ್ರಾಂ ಚಿನ್ನ ಬೆಲೆ 89,740 ರೂಪಾಯಿ ಆಗಿದೆ. ಇದೇ ವೇಳೆ 24 ಕಾರೆಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 10 ಗ್ರಾಂಗೆ 97,420 ರೂಪಾಯಿ ಆಗಿದೆ. ಇತ್ತ ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ನಗರದಲ್ಲಿ 24 ಕಾರೆಟ್ ಚಿನ್ನ 10 ಗ್ರಾಂ ಬೆಲೆ 97,900 ರೂಪಾಯಿ ಆಗಿದೆ.