newsics.com
ಬೆಂಗಳೂರು: ಸ್ಯಾಂಡಲ್ವುಡ್ ನಟಿ ಲಾಸ್ಯಾ ನಾಗರಾಜ್ ಅವರ ತಾಯಿ ಮೇಲೆ ಅವರ ಸ್ವಂತ ಸಹೋದರಿಯೇ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಘಟನೆ ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ನಡೆದಿದೆ. ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಅಕ್ಕ ಸುಧಾ ನಾಗರಾಜ್ ಮೊದಲ ಮಹಡಿಯಲ್ಲಿ ಮತ್ತು ತಂಗಿ ಮಂಗಳ ಶಶಿಧರ್ ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.
ಸುಧಾ ನಾಗರಾಜ್ ಅವರು ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು, ಇದೇ ಬಿಲ್ಡಿಂಗ್ನ ಗ್ರೌಂಡ್ ಫ್ಲೋರ್ನ ಪಾರ್ಕಿಂಗ್ ಜಾಗದಲ್ಲಿ ಹಲವು ವರ್ಷಗಳಿಂದ ಡಾನ್ಸ್ ಕ್ಲಾಸ್ ನಡೆಸುತ್ತಿದ್ದಾರಂತೆ. ಇದೇ ವಿಚಾರಕ್ಕೆ ಸುಧಾ ನಾಗರಾಜ್ ಹಾಗೂ ತಂಗಿ ಮಂಗಳಾ ನಡುವೆ ಪದೇ ಪದೇ ಕಿರಿಕ್ ಆಗುತ್ತಿತ್ತಂತೆ. ಈ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ಸುಧಾ ನಾಗರಾಜ್ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ಚೇತರಿಕೆ ನಂತರ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ
ತಮ್ಮ ತಾಯಿ ಡಾ. ಸುಧಾ ನಾಗರಾಜ್ ಮೇಲೆ ಹಲ್ಲೆಯಾಗಿದೆ ಅಂತ ಖುದ್ದು ನಟಿ ಲಾಸ್ಯಾ ನಾಗರಾಜ್ ಅವರೇ ಆರೋಪಿಸಿದ್ದಾರೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.