newsics.com
ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಯುವತಿಯ ಕಾಲಿಗೆ ನಮಸ್ಕರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು ಯುವಕನ ‘ಪುರುಷ ಲೈಸನ್ಸ್’ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.
ಯುವಕನೋರ್ವ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರಂನಲ್ಲಿರುವ ಚಿಕ್ಕ ಕಟ್ಟೆ ಮೇಲೆ ಕುಳಿತಿರುತ್ತಾನೆ. ಆತನ ಮುಂದೆಯೇ ಯುವತಿ ನಿಂತಿರುತ್ತಾಳೆ. ಯುವತಿಯ ಪಾದಗಳನ್ನು ಮುಟ್ಟಿ ಯುವಕ ಕೈಗಳನ್ನು ತನ್ನ ಕಣ್ಣುಗಳಿಗೆ ಮೂರು ಬಾರಿ ಒತ್ತಿಕೊಳ್ಳುತ್ತಾನೆ. ನಂತರ ಇಬ್ಬರ ಮಧ್ಯೆ ಚುಟುಕು ಮಾತುಕತೆಯೂ ನಡೆಯುತ್ತದೆ. ಇದಾದ ಬಳಿಕ ಖುಷಿಯಿಂದ ಕೈಯಲ್ಲಿ ಕ್ಯಾಂಡಿ ತಿನ್ನುತ್ತಾ ಕುಣಿಯುತ್ತಾಳೆ. ಈ ಎಲ್ಲಾ ದೃಶ್ಯಗಳನ್ನು ಎದುರಿನ ಪ್ಲಾಟ್‌ಫಾರಂನಲ್ಲಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ಪುರುಷರು, ಈತ ಗಂಡಸು ಜಾತಿಗೆ ಅವಮಾನ. ಯುವಕನ ‘ಪುರುಷ ಲೈಸನ್ಸ್’ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಸತೇಂದ್ರ ಪ್ರತಾಪ್ @SatendraPr42678 ಹೆಸರಿನ ಎಕ್ಸ್ ಖಾತೆಯಲ್ಲಿ ಏಪ್ರಿಲ್ 27ರಂದು ಪೋಸ್ಟ್ ಮಾಡಿಕೊಳ್ಳಲಾಗಿದೆ., ಅಖಿಲ ಭಾರತ ಖಾಂತಿ ಮರ್ದ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷನಾಗಿರುವ ನಾನು, ಈ ಯುವಕನ ಪುರುಷ ಪ್ರಮಾಣಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸುತ್ತೇನೆ. ಇಂತಹ ಯುವಕರು ಇಡೀ ಪುರುಷ ಸಮಾಜಕ್ಕೆ ಕಳಂಕ. ಇಂದು ಆಕೆಯ ಕಾಲಿಗೆ ನಮಸ್ಕರಿಸಿದ್ದಾನೆ. ನಾಳೆ ಆಕೆಯ ಕೈ-ಕಾಲುಗಳನ್ನು ಒತ್ತುತ್ತಾನೆ ಎಂದು ಬರೆದುಕೊಂಡಿದ್ದಾರೆ.