newsics.com
ನೆಲಮಂಗಲ: ಎಂದಿನಂತೆ ಪತ್ನಿ ಜೊತೆ ಸ್ನ್ಯಾಕ್ಸ್ ತಿನ್ನಲೆಂದು ಮನೆಯಿಂದ ಹೊರ ಹೋದಾಗ ಕಿಡ್ನ್ಯಾಪ್ ಮಾಡಿ ಹತ್ಯೆಗೈದ ಘಟನೆ ತುಮಕೂರಿನ ಜಯಪುರದಲ್ಲಿ ನಡೆದಿದೆ.
ಸೋಲೂರು ಮೂಲದ ದಿಲೀಪ್ ಕೊಲೆಯಾದ ಎಂದು ತಿಳಿದು ಬಂದಿದೆ. ದಾಬಸ್ ಪೇಟೆಯಲ್ಲಿ ಕಾರ್ಗೊ ನಡೆಸುತ್ತಿದ್ದ. ಸೋಲೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ದಿಪೀಲ್, 5 ವರ್ಷಗಳ ಹಿಂದೆ ಅದೇ ಮನೆಯ ಮಾಲೀಕನ ಪತ್ನಿಯನ್ನೇ ಪ್ರೀತಿಸಿ ಆಕೆಯನ್ನು ವಿವಾಹವಾಗಿದ್ದ. ಇದು ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು.
ಪತ್ನಿ ಜೊತೆ ದಿಲೀಪ್ ನೆಲಮಂಗಲಕ್ಕೆ ಸ್ನ್ಯಾಕ್ಸ್ ತಿನ್ನಲು ಬಂದಿದ್ದಾನೆ. ಈ ವೇಳೆ ಐದಾರು ಜನ ದುಷ್ಕರ್ಮಿಗಳ ತಂಡ ದಿಲೀಪ್ ಮೇಲೆ ದಾಳಿ ನಡೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಹತ್ಯೆಗೈದು ಆತನನ್ನು ಜಯಪುರ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.