newsics.com
ನಟ ಕಿಚ್ಚ ಸುದೀಪ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಬಿಲ್ಲಾ ರಂಗ ಬಾಷಾ ಚಿತ್ರೀಕರಣದ ಆರಂಭವನ್ನು ಅಧಿಕೃತವಾಗಿ ಇತ್ತೀಚೆಗೆ ಘೋಷಿಸಿದ್ದರು. ಅನೂಪ್ ಭಂಡಾರಿ ನಿರ್ದೇಶನದ ಮತ್ತು ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿ ಯಾರಾಗಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡಿತ್ತು.ಇದೇ ವಿಚಾರವಾಗಿ ಹೊಸದೊಂದು ಅಪ್ಡೇಟ್ ದೊರೆತಿದೆ.
ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದಲ್ಲಿ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂಬುವುದಾಗಿ ಹೇಳಲಾಗ್ತಿದೆ. ನಟಿ ಪೂಜಾ ಹೆಗ್ಡೆ ಅವರು ತೆಲುಗು, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲೂ ಯಶಸ್ಸು ಪಡೆದಿದ್ದಾರೆ .
ಇದಲ್ಲದೇ ಇತ್ತೀಚೆಗೆ ಪೂಜಾ ಹೆಗ್ಡೆ ಸಹ, ನನ್ನ ಪೋಷಕರು ನನಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಒತ್ತಾಯಿಸುತ್ತಿದ್ದಾರೆ ಎಂದಿದ್ದರು.
ಕಿಚ್ಚ ಸುದೀಪ್ ಜೊತೆ ಪೂಜಾ ಹೆಗ್ಡೆ ಬಿಲ್ಲಾ ರಂಗ ಬಾಷಾ ಸಿನಿಮಾದಲ್ಲಿ ನಟಿಸಿದರೆ ಇದು ಪೂಜಾ ಹೆಗ್ಡೆಯ ಮೊದಲ ಕನ್ನಡ ಸಿನಿಮಾ ಆಗಲಿದೆ. ಈ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಂತಾಗುತ್ತದೆ.
ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆಗೆ ಆಸ್ತಿ ವಿವಾದವೇ ಕಾರಣವಾ? ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದೇನು?