Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ
ದೇಶಪ್ರಮುಖ

ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ

Share
2 Min Read
SHARE

newsics.com

ಉತ್ತರ ಪ್ರದೇಶ: ನಾಲ್ಕು ವರ್ಷ ಲಿವ್ ಇನ್ನಲ್ಲಿ ಇದ್ದ ತನ್ನ ಗೆಳತಿ ಇದೀಗ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಯುವತಿಯೇ ಗಲಾಟೆ ಮಾಡಿ ಮದ್ವೆ ನಿಲ್ಲಿಸಿರೋ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಬುಲಂದ್‌ಶಹರ್‌ನ ಪಹಸು ಪೊಲೀಸ್ ಠಾಣೆ ಪ್ರದೇಶದ ಎಂ.ಎ ಪಾಸ್ ಆಗಿರುವ ಯುವತಿಯ ವಿವಾಹವು ಅಲಿಗಢದ ಕ್ವಾರ್ಸಿ ಪ್ರದೇಶದ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ಇಬ್ಬರ ಎಂಗೇಜ್ಮೆಂಟ್ ನಡೆಯುತ್ತಿತ್ತು. ವರ ಮತ್ತು ವಧು ಇಬ್ಬರೂ ವೇದಿಕೆಯ ಮೇಲೆ ನಿಂತಿದ್ದರು. ಅಷ್ಟರಲ್ಲಿ ಪ್ಯಾಂಟ್ ಮತ್ತು ಶರ್ಟ್ ಧರಿಸಿದ ಮತ್ತೊಬ್ಬ ಹುಡುಗಿ ಬೀನಾ ಅಲ್ಲಿಗೆ ಬಂದು ವಧುವಿನ ಕೈ ಹಿಡಿದು ತನ್ನೊಂದಿಗೆ ಎಳೆದೊಯ್ದಳು. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಸ್ಥಳದಲ್ಲಿ ಗದ್ದಲ ಉಂಟಾಯಿತು. ಆರಂಭದಲ್ಲಿ ಎಲ್ಲರಿಗೂ ಯುವಕನ ಮೇಲೆ ಡೌಟ್ ಬಂತು. ಆ ಯುವಕ, ಈ ಯುವತಿಯ ಲವರ್ ಇರಬಹುದು ಎಂದು. ಆದರೆ ಅಲ್ಲಿ ಆಗಿದ್ದೇ ಬೇರೆ. ಬೀನಾ ಮತ್ತು ವಧುವಾಗಿದ್ದ ಯುವತಿ ಇಬ್ಬರೂ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಗೊತ್ತಾಗಿದೆ. ಆದರೆ, ವಧುವಿನ ವೇಷ ಧರಿಸಿದ್ದ ಹುಡುಗಿ ಇದನ್ನು ನಿರಾಕರಿಸಿದಳು. ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಪೊಲೀಸರ ಪ್ರವೇಶವಾಯಿತು.

ಕೊನೆಗೆ ಬೀನಾಳನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಆಗ ಆಕೆ, ತಮ್ಮಿಬ್ಬರ ಲವ್ ಸ್ಟೋರಿ ತೆರೆದಿಟ್ಟಿದ್ದಾಳೆ. ಇಬ್ಬರೂ ಕೋಚಿಂಗ್ ಸೆಂಟರ್‌ನಲ್ಲಿ ಒಟ್ಟಿಗೆ ಓದಿದ್ದರು. ಬೀನಾ ಬಿಎ ಪಾಸ್ ಆಗಿದ್ದರೆ, ವಧು ಎಂಎ ಪಾಸ್ ಆಗಿದ್ದಾಳೆ. ಅವರು ಒಂದು ತರಬೇತಿ ಕೇಂದ್ರದಲ್ಲಿ ಸ್ನೇಹಿತರಾದರು. 2021 ರಲ್ಲಿ ನಡೆದ ವಿವಾಹದ ಸಮಯದಲ್ಲಿ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಯಿತು. ಕುಟುಂಬ ಸದಸ್ಯರು ಬೀನಾಳ ಮದುವೆಯನ್ನು ಮೂರು ಬಾರಿ ನಿಶ್ಚಯಿಸಿದ್ದರು. ಆದರೆ ಸ್ನೇಹಿತೆಗಾಗಿ ಆಕೆ ತನ್ನ ಮದುವೆಯನ್ನು ಮೂರು ಬಾರಿಯೂ ಏನೆನೋ ನೆಪ ಹೇಳಿ ತಪ್ಪಿಸಿದಳು. ಆದರೆ ಈಗ ಈಕೆ ಆರಾಮಾಗಿ ಮದುವೆಯಾಗುತ್ತಿದ್ದಾಳೆ. ಅವಳಿಗಾಗಿ ನಾನು ಮದುವೆಯಾಗಲಿಲ್ಲ, ಈಗ ಅವಳು ನನ್ನನ್ನು ಬಿಟ್ಟು ಪುರುಷನನ್ನು ಮದ್ವೆಯಾಗುತ್ತಿದ್ದಾಳೆ ಎಂದು ಹೇಳಿದ್ದಾಳೆ.
ಇದಾಗಲೇ ತಮ್ಮಿಬ್ಬರ ನಡುವೆ ಒಪ್ಪಂದ ಆಗಿದೆ. ಯಾರೂ ಬೇರೆ ಮದುವೆಯಾಗಬಾರದು ಎಂದು ಒಪ್ಪಂದ ಮಾಡಿಕೊಂಡಿದ್ದೇವೆ. ನನ್ನ ಅಮ್ಮ, ಅಪ್ಪ ಮತ್ತು ಅಣ್ಣ ಹುಡುಗನನ್ನು ಹುಡುಕಲು ಪ್ರಾರಂಭಿಸಿದಾಗ, ನಾನು ಅವಳಿಗೆ ಈ ವಿಷಯ ತಿಳಿಸಿದ್ದಾರೆ. ಅದಕ್ಕೆ ಅವಳು ಹೇಗಾದರೂ ಮಾಡಿ ಮದುವೆಯನ್ನು ಮುರಿದುಬಿಡು ಎಂದು ಹೇಳಿದಳು. ಯಾವುದೇ ಸಂಬಂಧ ನಮ್ಮಿಬ್ಬರ ದಾರಿಗೆ ಬಂದರೂ, ನಾವು ಅದನ್ನು ಮುರಿಯಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನನಗೆ ಒಂದು ಸಂಬಂಧವನ್ನು ಮನೆಯಲ್ಲಿ ಅಂತಿಮಗೊಳಿಸಿದ್ದಕ್ಕೆ ಆ ಹುಡುಗನಿಗೆ ನಾನು ಬೇರೆಯವರ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿ ತಪ್ಪಿಸಿಕೊಂಡಿದ್ದೇನೆ. ಇಷ್ಟೆಲ್ಲಾ ಇವಳಿಗಾಗಿ ಮಾಡಿರುವಾಗ ಈಗ ಇವಳು ಬೇರೆ ಮದ್ವೆಯಾಗಲು ಹೊರಟಿದ್ದಾಳೆ ಎಂದು ಬೀನಾ ತಿಳಿಸಿದ್ದಾಳೆ.

ಈ 3ದಿನದಂದು ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ

TAGGED:Love with a girlmarriage with a boy: Don't get confused.
Share This Article
Facebook Twitter Copy Link Print
Previous Article ಈ 3ದಿನದಂದು ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ
Next Article ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ  ಮಿಸ್ ಮಾಡಿಕೊಳ್ಳಬೇಡಿ

Popular Posts

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

You Might Also Like

ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?