ಬೆಂಗಳೂರು :ಯುವತಿಯ ಎದೆ ಮುಟ್ಟಿ ವಿಕೃತಿ ಮರೆದಿರುವ ಘಟನೆ ಬೆಂಗಳೂರನ ಪೀಣ್ಯಾದ HMTಲೇಔಟ್ ಬೆಳಕಿಗೆ ಬಂದಿದೆ.
8ನೇ ಮೈಲಿಯ ಪ್ರತಿಷ್ಟಿತ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿರುವ ಯುವತಿ, ಪೀಣ್ಯಾದ HMTಲೇಔಟ್ ನಲ್ಲಿ ರಾತ್ರಿ 9:45ರ ಸುಮಾರಿಗೆ ಜ್ಯೂಸ್ ಕುಡಿದು ವಾಪಸ್ ಪಿಜಿಗೆ ತೆರಳುವಾಗ ದುರುಳನೋರ್ವ ಆಕೆಯ ಎದೆ ಭಾಗಕ್ಕೆ ಮುಟ್ಟಿದ್ದಾನೆ. ಬಳಿಕ ಯುವತಿ ಕಿರುಚಾಡಿದ್ದರಿಂದ ಕಾಮುಕ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾನೆ.
ಯುವತಿಯ ಎದೆಯನ್ನು ಟಚ್ ಮಾಡಿ ವಿಕೃತಿ ಮೆರೆದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.