newsics.com
ಚಿತ್ರದುರ್ಗ: ಈಗಂತೂ ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳದ್ದೇ ಕಾರು ಬಾರು. ಮುದುವೆಗೂ ಮುಂಚೆ ಏಕಾಂತ ಸ್ಥಳದಲ್ಲಿ ಪ್ರೇಮಿಗಳಂತೆ ಬಗೆ ಬಗೆಯ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳಲು ಯುವ ಜನತೆ ಹಾತೊರೆಯುತ್ತದೆ.ಇದೊಂದು ಟ್ರೆಂಡಿ ಫೋಟೋಶೂಟ್ ಆಗಿ ವಿಶ್ವ ವ್ಯಾಪಕವಾಗಿದೆ. ಆದರೆ ಇಲ್ಲೊಂದು ಜೋಡಿ ಯಾವುದೇ ಅನುಮತಿ ಪಡೆಯದೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿ ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ.
ಚಿತ್ರದುರ್ಗದ ಮದಕರಿಪುರ ಅಂಡರ್ಪಾಸ್ ಬಳಿ ನೂತನ ಜೋಡಿಯೊಂದು ರೈಲ್ವೆ ಹಳಿ ಮೇಲೆ ಫ್ರೀ ವೆಡ್ಡಿಂಗ್ ಶೂಟ್ ಮಾಡಿಸಿದೆ. ಈ ಜೋಡಿ ಯಾವುದೇ ಅನುಮತಿ ಪಡೆಯದೇ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರು.ಇದೇ ವೇಳೆ ಏಕಾಏಕಿ ರೈಲು ಬಂದಿದೆ. ಶೂಟ್ಗೆಂದು ಹಳಿ ಮೇಲೆ ನಿಂತುಕೊಂಡಿದ್ದ ಐದು ಮಂದಿ ಕ್ಷಣ ಮಾತ್ರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡಿದ್ದಾರೆ.