ಹಾಸನ: ಎಸ್‌ಪಿ ಕಚೇರಿಯಲ್ಲಿ ಕಾನ್‌ಸ್ಟೇಬಲ್ ಲೋಕನಾಥ್ ಎಂಬುವವರು ಪತ್ನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಹಾಸನದ ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಲೋಕನಾಥ್ಕಾರ್ಯನಿರ್ವಹಿಸುತ್ತಿದ್ದರು. ಲೋಕನಾಥ್ ಮತ್ತು ಮಮತಾ ಮಧ್ಯೆ 4-5 ದಿನಗಳಿಂದ ಜಗಳ ನಡೆದಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ನೊಂದಿದ್ದರು ಎಂದು ತಿಳಿದುಬಂದಿದೆ. ಎಸ್‌ಪಿ ಕಚೇರಿಗೆ ದೂರು ನೀಡಲು ಬಂದಾಗ ಈ ಘಟನೆ
ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗಮನಿಸಿದ ಲೋಕನಾಥ್ ಆವರಣದಲ್ಲೇ ಮಮತಾ ಎದೆಗೆ ಚೂರಿ ಇರಿದಿದ್ದಾನೆ. ಕೂಡಲೇ ಅಲ್ಲಿದ್ದ ಮಂದಿ ಮಮತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಮತಾ ಮೃತಪಟ್ಟಿದ್ದಾರೆ. ಪತ್ನಿಯನ್ನು ಹತ್ಯೆ ಮಾಡಿದ ನಂತರ ಪರಾರಿಯಾಗುತ್ತಿದ್ದ ಲೋಕನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಜೈಲಿಗೆ ಮೀನಾ ತೂಗುದೀಪ ಭೇಟಿ- ತಾಯಿಯನ್ನು ನೋಡ್ತಿದಂತೆ ಕಣ್ಣೀರಿಟ್ಟ ದರ್ಶನ್
ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ!