newsics.com
ಗೋವಾ ರಾಜ್ಯಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಈ ನಡುವೆ ಗೋವಾ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಗೋವಾ ಸರಕಾರದಿಂದ ಹೊಸ ನಿಯಮ ಜಾರಿ ಮಾಡಲಾಗಿದೆ. ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡಿದ್ರೆ ಜೈಲು ಸೇರುದು ಗ್ಯಾರಂಟಿ.
ಇನ್ಮುಂದೆ ಗೋವಾ ಪ್ರವಾಸಕ್ಕೆ ಹೋಗುವಾಗ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಹಾಗೂ ಊಟದ ಸಾಮಗ್ರಿಗಳನ್ನೂ ತೆಗೆದುಕೊಂಡು ಹೋಗುವಂತಿಲ್ಲ. ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿಕೊಂಡು ಊಟ ಮಾಡುವಂತಿಲ್ಲ ಎಂದು ಗೋವಾ ಸರ್ಕಾರ ಆದೇಶ ಹೊರಡಿಸಿದೆ.
ಸ್ವಚ್ಛತೆ ಕಾಪಾಡೋ ಉದ್ದೇಶದಿಂದ ಪ್ರವಾಸಿಗರು ಎಲ್ಲೆಲ್ಲೋ ಅಡುಗೆ ಮಾಡಿ ತ್ಯಾಜ್ಯ ಬಿಸಾಕದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಆದರೆ, ಈಗ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಕಾನೂನು ಕ್ರಮದ ಜತೆ ವಾಹನ ಕೂಡಾ ಸೀಜ್ ಮಾಡಲಾಗುತ್ತದೆ.
ಇದೀಗ ಗೋವಾಗೆ ಹೋಗುವವರು ವಾಹನದಲ್ಲಿ ಗ್ಯಾಸ್ ಸಿಲಿಂಡರ್, ಸ್ಟವ್ ಮತ್ತು ಪಾತ್ರೆ- ಪಗಡೆ ಸಾಗಿಸಿದ್ರೆ ಗಡಿಯಲ್ಲೇ ಸೀಝ್ ಮಾಡೋದಾಗಿ ಗೋವಾ ಸರ್ಕಾರ ತಿಳಿಸಿದೆ. ಈ ಹಿನ್ನೆಲೆ ಗೋವಾ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ತಪಾಸಣೆ ಪ್ರಾರಂಭವಾಗಿದೆ.
https://www.newsics.com/2025/04/07/second-puc-results-to-be-announced-tomorrow/