Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ವಾರ ಭವಿಷ್ಯ > ವಾರ ಭವಿಷ್ಯ… 30 ಜೂನ್ 6 ಜುಲೈ 2024- ಮೀನಾಮೇಷ ಎಣಿಸದೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ
ಪಂಚಾಂಗವಾರ ಭವಿಷ್ಯ

ವಾರ ಭವಿಷ್ಯ… 30 ಜೂನ್ 6 ಜುಲೈ 2024- ಮೀನಾಮೇಷ ಎಣಿಸದೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ

Share
5 Min Read
SHARE

newsics.com

ವಾರ ಭವಿಷ್ಯ

30 ಜೂನ್- 6 ಜುಲೈ 2024

ಮೇಷ

ಮನದಾಸೆಯಂತೆ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ಉಂಟಾಗಲಿವೆ. ಸುಖ, ಸಂತೋಷದ ಸಂಸಾರ ನಿಮ್ಮದಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಅನಾವಶ್ಯಕ ಖರ್ಚುಗಳಾಗಲಿವೆ. ಒಳ್ಳೆಯ ಅಭ್ಯಾಸಗಳಿಂದ ಆರೋಗ್ಯ ಸುಧಾರಣೆ ಕಾಣಲಿದೆ. ಧ್ಯಾನ, ಯೋಗದಲ್ಲಿ ಆಸಕ್ತಿ ಮೂಡುತ್ತದೆ. ಉತ್ತಮ ಗೆಳೆತನ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಮಕ್ಕಳಿಗಾಗಿ ಹಣಕಾಸಿನ ಯೋಜನೆಯಲ್ಲಿ ಹಣವನ್ನು ಹೂಡುವಿರಿ. ಸಹೋದರ ಸಹೋದರಿಯರ ಜತೆಯಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಸ್ವಂತ ನಿರ್ಧಾರದಿಂದ ವಾಸಸ್ಥಳ ಬದಲಿಸುವಿರಿ. ನಿಮ್ಮ ವೈಯಕ್ತಿಕ ಅಭಿಪ್ರಾಯಗಳು ಉತ್ತಮ ಯಶಸ್ಸನ್ನು ನೀಡುತ್ತದೆ. ವಿರೋಧಿಗಳು ಹೆಚ್ಚಬಹುದು.

ವೃಷಭ
ಅನಿವಾರ್ಯವಾಗಿ ಬದಲಾದ ಜೀವನಶೈಲಿ ಶಾಂತಿ, ನೆಮ್ಮದಿಗೆ ಭಂಗ ತರಲಿದೆ. ಹಣಕಾಸಿನ ವಿಚಾರದಲ್ಲಿ ಆತ್ಮೀಯರ ಸಹಾಯ ದೊರೆತು ತೊಂದರೆ ದೂರವಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳಿರಲಿವೆ. ಉದ್ಯೋಗದಲ್ಲಿನ ತೊಂದರೆ ದೂರವಾಗಲಿದೆ. ಕುಟುಂಬದ ಮಂಗಳ ಕಾರ್ಯವೊಂದು ಯಶಸ್ವಿಯಾಗಲಿದೆ. ಮನೆಮಂದಿಯ ಜತೆ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮಧ್ಯಮಗತಿಯ ಫಲ ಗಳಿಸುತ್ತಾರೆ. ಉದ್ಯೋಗ ಬದಲಿಸುವ ಅವಕಾಶ ಬಳಸಿಕೊಳ್ಳುವುದಿಲ್ಲ. ಸಂದರ್ಭವನ್ನು ಅರ್ಥಮಾಡಿಕೊಂಡು ವಿವಾದದಿಂದ ದೂರ ಉಳಿಯುವಿರಿ. ಸ್ವಂತ ಕೆಲಸಕ್ಕೆ ಮೊದಲ ಆದ್ಯತೆ ನೀಡುವಿರಿ. ಸಂಗಾತಿಯಿಂದ ಹಣ ಸಹಾಯ ದೊರೆಯುತ್ತದೆ.

ಮಿಥುನ
ಉಪಯುಕ್ತ ಅಧ್ಯಯನಕ್ಕಾಗಿ ಸ್ವಲ್ಪ ಸಮಯ ಮೀಸಲಿಡುವಿರಿ. ಅನಾವಶ್ಯಕವಾಗಿ ದುಡುಕಿ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಆತ್ಮವಿಶ್ವಾಸದ ಕಾರಣ ಮನದಲ್ಲಿರುವ ಆತಂಕ ದೂರವಾಗುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಅನಾವಶ್ಯಕ ಊಹೆಗಳಿಂದ ಬೇಸರ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಆರಂಭದಲ್ಲಿ ತೊಂದರೆ ನಿಧಾನವಾಗಿ ಕಡಿಮೆಯಾಗುತ್ತದೆ. ಕುಟುಂಬದ ಸದಸ್ಯರ ಸಲಹೆಯಂತೆ ವ್ಯಾಪಾರ ಆರಂಭಿಸುವ ತೀರ್ಮಾನ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡುಬರಬಹುದು. ವಂಶಾಧಾರಿತ ಕೆಲಸವೊಂದನ್ನು ಆರಂಭಿಸುವಿರಿ. ತಾಯಿಯ ಜತೆಗಿನ ಮನಸ್ತಾಪ ಕೊನೆಗೊಳ್ಳುತ್ತದೆ. ವಂಶದ ಹಿರಿಯರ ಆಗಮನ ಸಂತಸ ನೀಡುತ್ತದೆ.

ಕಟಕ

ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಕಠಿಣ ಹ‌ಶ್ರಮ ಪಡಬೇಕಾಗುತ್ತದೆ. ಆಹಾರ ಸೇವನೆಯಲ್ಲಿ ನಿಮಗೆ ನೀವೇ ನಿಯಮ ರೂಪಿಸಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಇಲ್ಲ. ನಿಮ್ಮ ದುಡುಕಿನ ಮಾತು ಹೊಸ ವಿವಾದ ಸೃಷ್ಟಿಸಲಿದೆ. ಎಲ್ಲರ ಜತೆ ಹೊಂದಿಕೊಂಡು ಬಾಳಲು ಪ್ರಯತ್ನಿಸುವಿರಿ. ಕೆಲಸ-ಕಾರ್ಯಗಳಲ್ಲಿ ಅತಿಯಾದ ಅತುರ ತೋರಿದಲ್ಲಿ ತೊಂದರೆ ಉಂಟಾಗುತ್ತದೆ. ಭೂವಿವಾದವೊಂದು ಕಾನೂನಿನ ಸಹಾಯದಿಂದ ಪರಿಹಾರವಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದಿಲ್ಲ. ಪಾಲುದಾರಿಕೆ ವ್ಯಾಪಾರದಿಂದ ದೂರವಾಗುವಿರಿ.

ಸಿಂಹ

ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮಕ್ಕಳ ಸಲುವಾಗಿ ಅನಾವಶ್ಯಕ ವಿವಾದ ಎದುರಿಸುವಿರಿ. ಸಮಾಜದ ಮುಖ್ಯ ಸ್ಥಾನ ಅಲಂಕರಿಸುತ್ತೀರಿ. ಮನದ ಆಸೆಗಳನ್ನು ದೂರವಿಟ್ಟು ಕುಟುಂಬದ ಒಳಿತಿಗಾಗಿ ಬಾಳುವಿರಿ. ಉತ್ತಮ ಆದಾಯವಿರುತ್ತದೆ. ಖರ್ಚು- ವೆಚ್ಚ ಕಡಿತಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಜತೆ ಸಂತಸದಿಂದ ಬಾಳುವಿರಿ. ಅನಾವಶ್ಯಕವಾಗಿ ಎಲ್ಲರನ್ನೂ ಅನುಮಾನಿಸುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಮುಂಗೋಪ ಕಡಿಮೆ ಮಾಡಿಕೊಳ್ಳಿ. ಸಮಾಜದ ಗಣ್ಯ ವ್ಯಕ್ತಿ ಒಬ್ಬರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಸ್ವಂತ ಬಳಕೆಗಾಗಿ ದೊಡ್ಡ ವಾಹನ ಕೊಳ್ಳುವಿರಿ. ಮನರಂಜನೆಯಲ್ಲಿ ಆಸಕ್ತಿ ಇಲ್ಲ.

ಕನ್ಯಾ
ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಕಾರ್ಯಗತಗೊಳಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಯಶಸ್ಸು ಗಳಿಸುತ್ತಾರೆ. ಮಾನಸಿಕ ಒತ್ತಡವಿರುತ್ತದೆ. ವದಂತಿ ನಂಬಿ ಸುತ್ತಮುತ್ತಲಿನ ಜನರೊಂದಿಗೆ ವಾದ-ವಿವಾದ ಮಾಡಲಿದ್ದೀರಿ. ಕುಟುಂಬ ಸದಸ್ಯರ ಜತೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಹಠ ಬಿಟ್ಟು ಎಲ್ಲರೊಂದಿಗೆ ಪ್ರೀತಿಯಿಂದ ವ್ಯವಹರಿಸಲು ಪ್ರಯತ್ನಿಸುವಿರಿ. ಏಕಾಂಗಿತನವನ್ನು ಇಷ್ಟಪಡುವಿರಿ. ಆಪತ್ಕಾಲಕ್ಕೆ ಹಣ ಉಳಿಸಲು ತೀರ್ಮಾನಿಸುವಿರಿ. ಅನಿರೀಕ್ಷಿತವಾದ ಹಣ ಸಹಾಯ ನೆಮ್ಮದಿ ನೀಡುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ ಇರಲಿ. ಮಕ್ಕಳ ಪ್ರೀತಿಯನ್ನು ಸವಿಯುವಿರಿ.

ತುಲಾ
ಉತ್ತಮ ಕಾರ್ಯ ಯೋಜನೆ ಮತ್ತು ಸರಿಯಾದ ಪ್ರಯತ್ನದಿಂದ ಯಶಸ್ಸು ಗಳಿಸುತ್ತೀರಿ. ಒಮ್ಮೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಅನಗತ್ಯವಾಗಿ ಬದಲಿಸುವುದಿಲ್ಲ. ಸುತ್ತಮುತ್ತಲ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಫಲರಾಗುವಿರಿ. ಅನಿರೀಕ್ಷಿತ ಧನಾಗಮ ಹೊಸ ಆಸೆಗೆ ಕಾರಣವಾಗುತ್ತದೆ. ಭೂ ವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸುವಿರಿ. ಆದರೆ ಎಚ್ಚರಿಕೆ ಇರಲಿ. ಚಿನ್ನಾಭರಣ ಕೊಳ್ಳಲು ಹೆಚ್ಚಿನ ಹಣ ಖರ್ಚು ಮಾಡುವಿರಿ. ಹಿರಿಯ ಸದಸ್ಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಒತ್ತಡಕ್ಕೆ ಒಳಗಾಗಿ ಮುಖ್ಯ ಕೆಲಸ ಮುಂದೂಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಯಶಸ್ಸಿನಿಂದಾಗಿ ಸಂತೋಷಗೊಳ್ಳುವಿರಿ. ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ.

ವೃಶ್ಚಿಕ

ಆರೋಗ್ಯ ತೊಂದರೆ ದೂರವಾಗಲಿದೆ. ನೇರವಾದ ಮಾತುಗಳು ವಿವಾದವನ್ನುಂಟುಮಾಡುತ್ತದೆ. ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಕಾರ್ಯದಲ್ಲಿ ನ್ಯಾಯದ ಹಾದಿಯಲ್ಲಿರುವಿರಿ. ಉಪವೃತ್ತಿಯನ್ನು ಆರಂಭಿಸಿ ಯಶಸ್ಸು ಕಾಣುವಿರಿ. ಹಣಕಾಸಿನ ಕೊರತೆ ಇರುವುದಿಲ್ಲ. ಆರೋಗ್ಯದಲ್ಲಿನ ಸಮಸ್ಯೆ ದೂರವಾಗುತ್ತದೆ. ಕುಟುಂಬದ ಮಂಗಳ ಕಾರ್ಯವೊಂದರ ಯಶಸ್ಸಿನ ಪಾಲು ನಿಮ್ಮದಾಗಲಿದೆ. ಸ್ವಂತ ಅಭಿಪ್ರಾಯಗಳನ್ನು ಯಾರ ಮೇಲೂ ಹೇರುವುದಿಲ್ಲ. ಬೇರೆಯವರ ಸಲಹೆಯನ್ನೂ ಗೌರವಿಸುವಿರಿ. ಮಕ್ಕಳ ಆಟ ಪಾಠಗಳ ಮಧ್ಯೆ ಸಂತಸದಿಂದ ದಿನ ಕಳೆಯುವಿರಿ. ಚಿಕ್ಕ ಪುಟ್ಟ ಪ್ರವಾಸಗಳನ್ನು ಆಯೋಜಿಸಿ ಹಣ ಗಳಿಸುವಿರಿ. ಸಹನೆಯಿಂದ ವರ್ತಿಸಿ ಎಲ್ಲರ ಮನಸ್ಸನ್ನೂ ಗೆಲ್ಲುವಿರಿ.

ಧನುಸ್ಸು

ಕುಟುಂಬದಲ್ಲಿ ಒತ್ತಡದ ಸನ್ನಿವೇಶಗಳು ಇರಲಿವೆ. ಮಕ್ಕಳ ಅವಿಧೇಯತೆ ಬೇಸರವನ್ನು ಮೂಡಿಸುತ್ತದೆ. ಅವಕಾಶವಿದ್ದರೂ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುವುದಿಲ್ಲ. ಕುಟುಂಬದ ಒಮ್ಮತ ಕಾಪಾಡಲು ವಿಫಲರಾಗುವಿರಿ. ಏಕಾಂಗಿಯಾಗಿ ಹೋರಾಡಿ ತೊಂದರೆಯಿಂದ ಪಾರಾಗುವಿರಿ. ಪ್ರತಿಭಾ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗುತ್ತವೆ. ಮುಖ್ಯವಾದ ನಿರ್ಧಾರಗಳನ್ನು ಬದಲಿಸುವ ಕಾರಣ ಆತಂಕ ಎದುರಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಕೇವಲ ಉತ್ತಮ ದೈನಂದಿನ ಜೀವನದ ಕ್ರಮದಿಂದ ಉತ್ತಮ ಆರೋಗ್ಯ ಗಳಿಸುವಿರಿ. ದಂಪತಿಗಳ ನಡುವಿನ ಮನಸ್ತಾಪ ಕೊನೆಯಾಗಲಿದೆ. ಸಂಗಾತಿ ಮತ್ತು ಮಕ್ಕಳ ಜತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ.

ಮಕರ

ಆತುರದ ತೀರ್ಮಾನಗಳು ಹಣಕಾಸಿನ ವಿಚಾರದಲ್ಲಿ ತೊಂದರೆ ನೀಡಲಿವೆ. ಯಾವುದೇ ಕೆಲಸವಾದರೂ ದ್ವಂದ್ವ ಮನಸ್ಸಿನಿಂದ ಮಾಡುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಪ್ರವಾಸ ಕೈಗೊಳ್ಳುವಿರಿ. ಹೊಸ ಉದ್ಯೋಗಿಗಳು ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ತೆರಳಬಹುದು. ವಾಹನದಿಂದ ಅಥವಾ ಲೋಹದ ವಸ್ತುವಿನಿಂದ ತೊಂದರೆಯಾಗಬಹುದು. ಸಹೋದರ ಮತ್ತು ತಾಯಿಯ ನಡುವೆ ಹಣಕಾಸಿನ ವಿಚಾರದಲ್ಲಿ ಇದ್ದ ಮನಸ್ತಾಪ ಬಗೆಹರಿಸುವಿರಿ. ಕುಟುಂಬದ ಬಹುತೇಕ ಜವಾಬ್ದಾರಿ ನಿಮ್ಮದಾಗುತ್ತದೆ. ಕಷ್ಟವಾದರೂ ಕೆಲಸದ ನಡುವೆ ವಿಶ್ರಾಂತಿಗೂ ಸಮಯ ನೀಡುವಿರಿ. ಆಪತ್ತಿನಲ್ಲಿ ಇರುವ ಜನರಿಗೆ ಸಹಾಯ ನೀಡುವಿರಿ. ಮುಂದಾಲೋಚನೆಯಿಂದ ಹಣ ಉಳಿತಾಯ ಮಾಡುವಿರಿ.

ಕುಂಭ

ಅನಗತ್ಯ ಖರ್ಚು ವೆಚ್ಚಗಳಿರುತ್ತವೆ. ಸೋಲಿನ ಭಯದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಂಯಮದಿಂದ ನಡೆದುಕೊಂಡಲ್ಲಿ ಎದುರಾಗುವ ತೊಂದರೆ ಮರೆಯಾಗುತ್ತದೆ. ನಿಮ್ಮ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಆತ್ಮೀಯರೊಬ್ಬರು ದೂರವಾಗುತ್ತಾರೆ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನದಿಂದ ಸಹೋದ್ಯೋಗಿಗಳಿಗೂ ಒಳ್ಳೆಯದಾಗುತ್ತದೆ. ಬೇರೆಯವರ ತಪ್ಪನ್ನು ನಿಂದಿಸುವ ಬದಲು ಸ್ನೇಹದಿಂದ ಇರುವಿರಿ. ಹಣಕಾಸಿನ ವಿವಾದವು ನಿಮ್ಮ ಮಧ್ಯಸ್ಥಿಕೆಯಿಂದ ಬಗೆಹರಿಯುವುದು. ಕುಟುಂಬದ ಎಲ್ಲರೂ ನಿಮ್ಮನ್ನು ಅವಲಂಬಿಸಿರುತ್ತಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಅನಿರೀಕ್ಷಿತ ಹಣದ ಮುಗ್ಗಟ್ಟು ಕಿರಿಕಿರಿ ಉಂಟುಮಾಡುತ್ತದೆ. ತಾಳ್ಮೆಯಿಂದ ಎಲ್ಲರ ಮನ ಗೆಲ್ಲುವಿರಿ.

ಮೀನ

ಬಗೆಹರಿಯದ ಸಮಸ್ಯೆಗಳು ನಿಮ್ಮ ನೆರವಿನಿಂದ ಕೊನೆಗೊಳ್ಳಲಿವೆ. ಉತ್ತಮ ಆರೋಗ್ಯವಿರುತ್ತದೆ. ಮಕ್ಕಳ ಜತೆ ಸಂತೋಷವಾಗಿ ದಿನಗಳನ್ನು ಕಳೆಯುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮಾತಿನ ಬಲದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಕಿರು ಪ್ರವಾಸಗಳನ್ನು ಆಯೋಜಿಸುವಿರಿ. ಅತಿಯಾದ ಒಳ್ಳೆಯತನ ಆಪತ್ತಿಗೆ ಸಿಲುಕಿಸಲಿದೆ. ಬೇರೆಯವರ ಹಣಕಾಸಿನ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿದಲ್ಲಿ ತೊಂದರೆ ಎದುರಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ನಯವಿನಯದಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಉದ್ಯೋಗ ಬದಲಾಗುವ ಸಾಧ್ಯತೆಗಳಿವೆ. ವಾದ ವಿವಾದಗಳಿಂದ ದೂರ ಉಳಿಯುವಿರಿ. ವಿಶೇಷವಾದ ಉಡುಗೊರೆ ಸಿಗಲಿದೆ.

TAGGED:Weekly Predictions... 30 June 6 July 2024
Share This Article
Facebook Twitter Copy Link Print
Previous Article ಚಡ್ಡಿಯೊಳಗೆ ಅವಿತು ಕುಳಿತ ಹಾವು; ಎಚ್ಚರವಾದಾಗ ಯುವಕ ಮಾಡಿದ್ದೇನು ಗೊತ್ತಾ?
Next Article ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ, ಬ್ಯಾನ್ಗೆ ಚಿಂತನೆ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?