ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್ ಶಾಕ್ವೊಂದನ್ನು ನೀಡಿದೆ. ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ. ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ಡ್ ಬೆಲೆಗಳಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ.
ಹಾಗಾದ್ರೆ, ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ದರ ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ? ಎನ್ನುವ ವಿವರ ಇಲ್ಲಿದೆ.
ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?
155 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ 189 ರೂಪಾಯಿಗೆ ಬದಲಾಗಿದ್ದರೂ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ 249 ರೂಪಾಯಿ ಆಗಲಿದೆ. ಇದರಲ್ಲಿ 40 ರೂಪಾಯಿ ಏರಿಕೆಯಾಗಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ. ಇನ್ನು ಡೇಟಾ ಬೆನಿಫಿಟ್‌ಗಳಲ್ಲಿ ಈ ಪ್ಲ್ಯಾನ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅನಿಯಮಿತ 5G ಡೇಟಾವನ್ನು ನೀಡುತ್ತಿದ್ದ ರೂ 239 ಯೋಜನೆಯು ಇನ್ನು ಮುಂದೆ ಹಾಗರ ಇರೋದಿಲ್ಲ. 239 ಪ್ಲಾನ್ ಈಗ ರೂ 299 ವೆಚ್ಚವಾಗಲಿದೆ ಮತ್ತು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈಗ ಅನಿಯಮಿತ 5G ಡೇಟಾವು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಬೇಕಿದೆ. ಜುಲೈ 3 ರಿಂದ ತನ್ನ .ಹೊಸ ಯೋಜನೆಗಳು ಜುಲೈ 3, 2024 ರಿಂದ ಜಾರಿಗೆ ಬರಲಿವೆ. ರಿಲಯನ್ಸ್ ಜಿಯೋ ಕೂಡ ಹೊಸ ಸೇವೆಗಳನ್ನು ಪ್ರಾರಂಭಿಸಿದೆ.