newsics.com
ಕೊಲಂಬೊ: ಆನ್‍ಲೈನ್‍ನಲ್ಲಿ ಹಣಕಾಸು ವಂಚನೆಯಲ್ಲಿ ತೊಡಗಿದ್ದ 60 ಭಾರತೀಯ ಪ್ರಜೆಗಳನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.
ಕೊಲಂಬೊ ಸುತ್ತಮುತ್ತಲಿನ ಮಡಿವೇಲಾ, ಬಟ್ಟರಮುಲ್ಲಾ ಮತ್ತು ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸಂತ್ರಸ್ತೆಯೊಬ್ಬರ ದೂರಿನ ಅನ್ವಯ ಈ ಪ್ರದೇಶಗಳಲ್ಲಿ ಏಕಕಾಲದಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಬಂಧಿತ ಆರೋಪಿಗಳಿಂದ 135 ಮೊಬೈಲ್ ಫೋನ್‍ಗಳು ಮತ್ತು 57 ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈ ಪೊಲೀಸ್ ವಕ್ತಾರ ಎಸ್‍ಎಸ್‍ಪಿ ನಿಹಾಲ್ ತಾಲ್ದುವ ತಿಳಿಸಿದ್ದಾರೆ.
ಬಂಧಿತರು ವಾಟ್ಸಾಪ್ ಮೂಲಕ ಜನರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡುತ್ತಿದ್ದರು. ಬಳಿಕ ಠೇವಣಿ ಇಡುವಂತೆ ಸೂಚಿಸಿ ಒತ್ತಡ ಹಾಕಿ ವಂಚಿಸುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಇಬ್ಬರೂ ವಂಚಕರಿಗೆ ನೆರವು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ಕ- ನೆರೆಹೊರೆಯವರೊಂದಿಗೆ ಮನಸ್ತಾಪ, ಕುಂಭ- ಕೋಪದಿಂದ ದೂರವಿರಿ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
26 ವರ್ಷದ ಯುವಕ ತಯಾರಿಸಿದ ಮೆಸೇಜಿಂಗ್ ಆ್ಯಪ್ ಬರೋಬ್ಬರಿ 416 ಕೋಟಿ ರೂ.ಗೆ ಸೇಲ್